ವಾರಕ್ಕೆರಡು ಬಾರಿ ಸುಳ್ಳು ಹೇಳಲು ರಾಜ್ಯಕ್ಕೆ ಬರುತ್ತಿರುವ ಮೋದಿ-ರಮಾನಂದ ನಾಯಕ
ಹೊನ್ನಾವರ : ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ನೆರೆಹಾವಳಿ ಮತ್ತು ಕರೋನಾದಂತಹ ರೋಗದಿಂದ ಜನತತ್ತರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಕಡೆ ಕಣ್ಣೆತ್ತಿಯೂ ನೋಡದ ದೇಶದ ಪ್ರಧಾನಿ ನರೇಂದ್ರ ಮೋದಿ,ಈಗ ಕರ್ನಾಟಕ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ, ವಾರಕ್ಕೆ ಎರಡು ಬಾರಿ ರಾಜ್ಯಕ್ಕೆ ಬಂದು ಸುಳ್ಳು ಬರವಸೆ ನೀಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಕನ್ನಡ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕ ಆರೋಪಿಸಿದ್ದಾರೆ.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಬೂತ್ ಮಟ್ಟದ ಪ್ರಜಾಧ್ವನಿ ಕಾರ್ಯಕ್ರಮದ ಕುರಿತಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯುದ್ದಕ್ಕೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರೇ, ಮೋದಿ ಸರಕಾರ 60 ವರ್ಷಗಳಲ್ಲಿ ಕಾಂಗ್ರಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವುದು ವಿಪರ್ಯಾಸ ಎಂದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ದೇಶದ ಅಧಿಕಾರದ ಚುಕ್ಕಾಣಿ ಹಿಡಿz ಸಂದರ್ಭದಲ್ಲಿ ಕೇವಲ ರಾಜಸ್ಥಾನದ ರಾಜವಂಶಸ್ಥರ 15 ಕುಟುಂಬದವರಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತು.
ಆದರೆ ಇಂದು ದೇಶವ್ಯಾಪಿ ಭಾರತದ ಕೋಟ್ಯಂತರ ಜನರ ಕೈಯಲ್ಲಿ ಮೊಬೈಲ್ ಮತ್ತಿತರ ಉಪಕರಣಗಳಿದ್ದರೇ ಅದು ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೆಮ್ಮೆಯಿಂದ ನುಡಿದರು. ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದ ಪ್ರಧಾನಿ ಮೋದಿಯಿಂದ ದೇಶ, “ಮನ್ ಕೀ ಬಾತ್” ಕೇಳುವ ಪರಿಸ್ಥಿತಿ ಬಂದಿರುವುದು ನಾಡಿನ ದುರ್ರ್ದೈವ ಎಂದರು. ರಾಜ್ಯದ ಬೊಮ್ಮಾಯಿ ಸರಕಾರದ ಸಂಪುಟ ಸಹೋದ್ಯೋಗಿ ಅಶ್ವಥ ನಾರಾಯಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು, ಟಿಪ್ಪು ರೀತಿಯಲ್ಲಿ ಹೊಡೆದುರುಳಿಸಬೇಕು ಎನ್ನುವುದು ಬಿ.ಜೆ.ಪಿ. ಪಕ್ಷದ ನೈತಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ವಾರಕ್ಕೆರಡು ಬಾರಿ ಸುಳ್ಳು ಹೇಳಲು ರಾಜ್ಯಕ್ಕೆ ಬರುತ್ತಿರುವ ಮೋದಿ-ರಮಾನಂದ ನಾಯಕ
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ನೇತ್ರತ್ವದಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿ ಬೂತ್ ಮಟ್ಟದಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡು, ರಾಜ್ಯ ಮತ್ತು ಕೇಂದ್ರದ ಬಿ.ಜೆ.ಪಿ.ಸರಕಾರದ ಜನವಿರೋಧಿ ನೀತಿಯನ್ನು ಜನತೆಗೆ ತಿಳಿಸಲಾಗುವುದು ಎಂದರು.
ಸಭೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಬ್ಲಾಕ್ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ, ಪಕ್ಷದ ಮುಖಂಡರಾದ ಇಮ್ದಾದ್ ಅಲಿ, ಸುರೇಶ ಮೇಸ್ತ, ಪ್ರಶಾಂತ ನಾಯ್ಕ, ಮಾದೇವ ನಾಯ್ಕ ಕರ್ಕಿ, ಹಳದೀಪುರ ಘಟಕದ ಅಧ್ಯಕ್ಷ ಜನಾರ್ಧನ ನಾಯ್ಕ, ಬಿ.ಸಿ.ಸಿ.ಕಾರ್ಯದರ್ಶಿ ಲಂಭೋಧರ ನಾಯ್ಕ ಇನ್ನೂ ಮುಂತಾದವರು ಮಾತನಾಡಿದರು.
ವಾರಕ್ಕೆರಡು ಬಾರಿ ಸುಳ್ಳು ಹೇಳಲು ರಾಜ್ಯಕ್ಕೆ ಬರುತ್ತಿರುವ ಮೋದಿ-ರಮಾನಂದ ನಾಯಕ
ವೇದಿಕೆಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಯ್ಯಾ ಶೇಖ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಕೇಶವ್ ಮೇಸ್ತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Leave a Comment