ಮದುವೆಗೆ ಆಹ್ವಾನ ನೀಡುವ ನೆಪದಲ್ಲಿಚಾಕುವಿನಿಂದ ಹಲ್ಲೆ
ಶಿರಸಿ:
ಮದುವೆಯ ಕರೆಯ ತಂದಿದ್ದು ಬಾಗಿಲು ಮನೆಯೊಳಗೆ ಕಾಲಿಟ್ಟು ಯಜಮಾನನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿ, ಪ್ರತಿರೋಧದ ವೇಳೆ ತಾನು ಅಪಾಯಕ್ಕೆ ಸಿಕ್ಕಿ ಬೀಳುವ ಭಯದಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ತಾಲೂಕಿನ ಮಂಡೆಮನೆಯಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ತೆರೆಯುವಂತೆ ಹೇಳಿ
ಜಿ.ಆರ್. ಹೆಗಡೆ ಮಂಡೆಮನೆ ಚಾಕುಯಿರತಕ್ಕೆ ಒಳಗಾಗಿದ್ದು ಅಂಗೈ ಮೇಲೆ ಗಾಯವಾಗಿದೆ. ತಕ್ಷಣ ತಮ್ಮ ರಕ್ಷಣೆಯಲ್ಲಿ ಪ್ರತಿರೋಧಿಸಿದ ಅವರಿಗೆ ಹೆಚ್ಚಿನ ಅಪಾಯವಾಗಲಿಲ್ಲ.
ಮದುವೆಯ ಕರೆಯೋಲೆ ತಂದಿದ್ದೇನೆ, ಬಾಗಿಲು ತೆರೆಯಿರಿ ಎಂದು ಅಪರಿಚಿತ ವ್ಯಕ್ತಿಯೊಬ್ಬ ಹವ್ಯಕ ಭಾಷೆಯಲ್ಲೇ ಹೇಳಿ ಕರೆದಾಗ ಜಿ.ಆರ್. ಹೆಗಡೆ ಸಹಜವಾಗಿ
ಬಾಗಿಲು ತೆರೆದರು. ಮನೆಯ ಪ್ರವೇಶಿಸುತ್ತಿದ್ದಂತೆ ಆತನ ಪರಿಚಯ ಕೇಳಿದರು. ಅಷ್ಟರಲ್ಲೇ ಆತ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ.
ಹೆಗಡೆಯವರ ಕೈಗೆ ಗಾಯವಾಯಿತು. ಈ ವೇಳೆ ಗಾಬರಿಯ ಕೂಗಾಟದ ಜತೆ ಹೆಗಡೆಯವರು ಮಗನನ್ನು ಕೂಗಿ ಬಂದೂಕು ತರುವಂತೆ ಹೇಳಿದರು. ಅಪ್ಪನ ಕೂಗು ಕೇಳಿ ಮಗ ಬಂದೂಕು ತುರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಭಯಗೊಂಡು ಪರಾರಿಯಾದ ಎನ್ನಲಾಗಿದೆ.
ಮದುವೆಗೆ ಆಹ್ವಾನ ನೀಡುವ ನೆಪದಲ್ಲಿಚಾಕುವಿನಿಂದ ಹಲ್ಲೆ
ಈ ಘಟನೆ ವೈಯಕ್ತಿಕ ದ್ವೇಷಕ್ಕಾಗಿ ನಡೆದಿದೆಯೋ ಅಥವಾ ಸುಲಿಗೆ ಯಾ ದರೋಡೆಗಾಗಿ ನಡೆದಿದೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಕಳ್ಳ ಮನೆಗೆ ಬಂದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೂಡಲೇ ಶಿರಸಿ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
Leave a Comment