ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
ಸಿದ್ದಾಪುರ:
ತಾಲೂಕಿನ ಮಾವಿನಗುಂಡಿಯ ಫಾರೆಸ್ಟ ಚೆಕ್ ಪೋಸ್ಟನ ಮಾರ್ಗದಲ್ಲಿ ಶನಿವಾರ ಬೆಳಗಿನ ಜಾವ (ಕೆ.ಎ.25 ಝಡ್ 9086) ರಿಡ್ಡ ಕಾರಿನಲ್ಲಿ 15 ಕೆಜಿಗಳಷ್ಟು ದನದ ಮಾಂಸವನ್ನು ಸಾಗಿಸುತ್ತಿರುವಾಗ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪೊಲೀಸರು ಭಟ್ಕಳ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಮೊಹ್ಮದ್ಮೊಸಿನ್ ತಂದೆ ರಹಮುತಲ್ಲಾ ಕಂಚಿಕೇರಿ ಹಾಗೂ ಅದೇ ಕಾಲೇಜಿನ ಲೆಕ್ಚರರ್ ಮಹ್ಮದ್ ಯಾಸಿನ್ ತಂದೆ ಮಹ್ಮದ್ ಇರ್ಫಾನ್ ಅವರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದಾವಣಗೆರೆಯಿಂದ ಭಟ್ಕಳಕ್ಕೆ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ದನದ ಮಾಂಸವನ್ನು ಒಯ್ಯಲಾಗುತ್ತಿತ್ತೆಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.
Leave a Comment