ಗ್ರಾಮ ಒನ್ ಕೇಂದ್ರ ಆರಂಭಕ್ಕೆ ಅರ್ಜಿ ಆಹ್ವಾನ 2023
ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ 201 ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದ 26 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿರಸಿ ತಾಲೂಕಿನ ಭಾಸಿ, ಬಿಸಲಕೊಪ್ಪ, ಶಿವಳ್ಳಿ, ಸಾಲ್ಕಣಿ, ಜಾನ್ಮನ, ಇಟಗುಳಿ, ಸುಗಾವಿ,ಮೇಲಿನ ಓಣಿಕೇರಿ, ಯಡಳ್ಳಿ, ಮಂಜುಗುಣಿ ಗ್ರಾಮಪಂಚಾಯಿತಿಗಳಲ್ಲಿ ಜೋಯಿಡಾ ತಾಲೂಕಿನ ಜೊಯಿಡಾ, ಗಾಂಗೋಡಾ, ಶಿಂಗರಗಾಂವ್, ಬಜಾರಕುಣಂಗ, ನಂದಿಗದ್ದೆ ಗ್ರಾಮಪಂಚಾಯಿತಿಗಳಲ್ಲಿ, ಹೊನ್ನಾವರ ತಾಲೂಕಿನ ಕಾಸರಗೋಡ ಗ್ರಾಮಪಂಚಾಯಿತಿಗಳಲ್ಲಿ, ಕಾರವಾರ ತಾಲೂಕಿನ ಹಣಕೋಣ, ಕದ್ರಾ, ವೈಲವಾಡ ಗ್ರಾಮ ಪಂಚಾಯಿತಿ, ಸಿದ್ದಾಪುರ ತಾಲೂಕಿನ ಕಾವಂಚೂರು, ಮನ್ಮನೆ, ತಾಂಡಗುಂಡಿ ಗ್ರಾಮಪಂಚಾಯಿತಿ, ಅಂಕೋಲಾ ತಾಲೂಕಿನ ಬೊಬ್ರುವಾಡ, ವಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ, ಯಲ್ಲಾಪುರ ತಾಲೂಕಿನ ಹಾಸಣಗಿ, ದೇಹಳ್ಳಿ ಗ್ರಾಮ ಪಂಚಾಯತಗಳಿಗೆ ಸದರಿ ಪ್ರಾಂಚೈಸಿಗಳು ಜೂ.12 ರೋಳಗಾಗಿ ವೆಬ್ಸೈಟ್: ಛುಣ. ಟಥಿ/3ಡಛಿಔಠಿಔ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತಹಶೀಲ್ದಾರ ಕಚೇರಿಗೆ ಸಂಪರ್ಕಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment