ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆ
ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಒರಿಜಿನಲ್ ಐಡಿ ಪ್ರೊಫ್ ತೋರಿಸಬೇಕು ಎಂಬ ನಿಯಮವಿಲ್ಲ. ಝರಾಕ್ಸ್ ಇದ್ದರೆ ಸಾಕು ಎಂದು ಸಾರಿಗೆ ಇಲಾಖೆ ಹೇಳಿದೆ. ಗುರುತಿನ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಆಧಾರ್ ಕಾರ್ಡ್ ಹಾಗೂ ವೋಟ ಐಡಿಯ ಝರಾಕ್ಸ್ ಪ್ರತಿ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಹಾರ್ಡ್ ಮತ್ತು ಸಾಫ್ಟ್ ಕಾಪಿ ಇದ್ದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದೆ.
Leave a Comment