5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡ
ಬೆಂಗಳೂರು: ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಪ್ರಶೋತ್ತರದಲ್ಲಿ ಬೇಳೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಪ್ರಶ್ನೆ ಕೇಳಿ ರಾಜ್ಯದಲ್ಲಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಗ್ರಾಮ ಠಾಣೆ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿರುವ 5 ಗುಂಟೆ ಒಳಗಿನ ಭೂಮಿಯಲ್ಲಿ ಗೃಹ ನಿರ್ಮಾಣಕ್ಕೆ ಮತ್ತು ನೋಂದಣಿಗೆ ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.
5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡ
ಇದಕ್ಕೆ ಉತ್ತರ ನೀಡಿದ ಕೃಷ್ಣ ಭೈರೇಗೌಡ 5 ಗುಂಟೆ ಒಳಗಿನ ಕಂದಾಯ ಭೂಮಿಯನ್ನು ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ನೋಂದಣಿಗೆ ನಿರ್ಬಂಧ ಇರಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವವರು ಈ ರೀತಿಯ ಸಣ್ಣ ಸಣ್ಣ ಪ್ರಮಾಣದ ಭೂಮಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿ ಸೌಲಭ್ಯ ಇಲ್ಲದೆ ಇರುವಾಗ ಜನ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ.
ಈ ಕಾರಣಕ್ಕಾಗಿ 2021ರಲ್ಲಿ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ಕಡಿಮೆ ಪ್ರಮಾಣದ ಭೂಮಿ ನೋಂದಣಿಯಾಗಲಿದೆ. ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಎಲ್ಲಿಯಾದರೂ ಈ ರೀತಿಯ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ ಸರಿಪಡಿಸಿ ಕೊಡುತ್ತೇವೆಂದು ಭರವಸೆ ನೀಡಿದರು.
Leave a Comment