ಪಡಿತರ ಹಣಕ್ಕಾಗಿ ಕೆವೈಸಿ ಮಾಡಿಸಿಕೊಳ್ಳಲು ಸೂಚನೆ 2023
ಕಾರವಾರ: ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ ರೂ.34ರಂತೆ ಒಬ್ಬ ಸದಸ್ಯರಿಗೆ ರೂ.170ರಂತೆ ಪಡಿತರ ಚೀಟಿಯಲ್ಲಿ ಎಲ್ಲ ಸದಸ್ಯರಿಗೆ ಸೇರಬೇಕಾದ ಒಟ್ಟು ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲು ಸರ್ಕಾರ ಅದೇಶಿಸಿದ್ದು, ಜಿಲ್ಲೆಯಲ್ಲಿ ಒಟ್ಟು 16,285 ಅಂತ್ಯೋದಯ ಪಡಿತರ ಚೀಟಿ ಚಾಲ್ತಿಯಲ್ಲಿದ್ದು ಹಾಗೂ 2,94,497 ಆದ್ಯತಾ ಪಡಿತರ ಚೀಟಿಗಳ ಪೈಕಿ ಬ್ಯಾಂಕ್ ಖಾತೆಗಳು ಸಕ್ರಿಯವಾಗಿದ್ದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಆಗಿರುವ 237444 ಫಲಾನುಭವಿಗಳ ಖಾತೆಗೆ ಒಟ್ಟು 14.32 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ಆಹಾರಧಾನ್ಯವನ್ನು ಪಡೆಯದೆ ಇರುವ ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗಿರುವುದಿಲ್ಲ.
ಪಡಿತರ ಹಣಕ್ಕಾಗಿ ಕೆವೈಸಿ ಮಾಡಿಸಿಕೊಳ್ಳಲು ಸೂಚನೆ 2023
ಉಳಿದಂತೆ 39,043 ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿರುತ್ತವೆ/ಕೆಲವು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ಇರುವುದಿಲ್ಲ. ಇಂತಹ ಪಡಿತರ ಚೀಟಿದಾರರ ವಿವರಗಳು ತಾಲೂಕು ಕಚೇರಿಗಳಲ್ಲಿ ಹಾಗೂ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿದ್ದು, ಅದನ್ನು ಪರಿಶೀಲಿಸಿಕೊಂಡು ಈವರೆಗೆ ಬ್ಯಾಂಕ್ ಖಾತೆಯನ್ನು ಹೊಂದದೇ ಇರುವ ಫಲಾನುಭವಿಗಳು ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ತೆರಳಿ ತಮ್ಮ ಖಾತೆಯನ್ನು ತೆರೆಯುವುದು ಹಾಗೂ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು.
ಪಡಿತರ ಹಣಕ್ಕಾಗಿ ಕೆವೈಸಿ ಮಾಡಿಸಿಕೊಳ್ಳಲು ಸೂಚನೆ 2023
ಒಂದುವೇಳೆ ಫಲನುಭವಿಗಳು ಖಾತೆಯನ್ನು ಹೊಂದಿದ್ದು ಅದು ಇನ್ ಆಕ್ಟಿವ್/ ಸಸ್ಪೆಂಡ್ ಆಗಿದ್ದರೆ ಅಂತಹ ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕಿಗೆ ತೆರಳಿ ಬ್ಯಾಂಕ್ ಖಾತೆ ಇ- ಕೆವೈಸಿ ಮಾಡಿಸಬೇಕು. ಜು.20ರೊಳಗಾಗಿ ತಮ್ಮ ಖಾತೆಯ ತಿದ್ದುಪಡಿಸಿ/ಹೊಸ ಖಾತೆಗಳನ್ನು ತೆರೆದು ಆಧಾರ್ ಸೀಡಿಂಗ್ ಮಾಡಿದ್ದಲ್ಲಿ ಮಾತ್ರ ಆಗಸ್ಟ್ 2023ರ ಮಾಹೆಗೆ ಡಿ.ಬಿ.ಟಿ ಯೋಜನೆಗೆ ಅರ್ಹರಾಗಿರುತ್ತಾರೆ.
ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರ ವಿವರಗಳನ್ನು https://ahara.kar.nic.in/status2/status_of_dbt.aspx ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಕಚೇರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Beware of cyber fraudsters! Do not click any link to verify your payments. Visit your bank to check the payment status! or from trusted source. For more information visit https://staysafeonline.in/ or https:/www.cert-in.org.in/.
ಸೈಬರ್ ವಂಚಕರ ಬಗ್ಗೆ ಎಚ್ಚರ! ನಿಮ್ಮ ಪಾವತಿಗಳನ್ನು ಪರಿಶೀಲಿಸಲು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಪಾವತಿ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ಗೆ ಭೇಟಿ ನೀಡಿ! ಅಥವಾ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಸಂಗ್ರಹಿಸಿ. ಹೆಚ್ಚಿನ ಮಾಹಿತಿಗಾಗಿ https://staysafeonline.in/ or https:/www.cert-in.org.in/ ಗೆ ಭೇಟಿ ನೀಡಿ
Leave a Comment