ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯವಾಗಿ ಕೇಳುವ ಪುಶ್ನೆಗಳು 2023-24 Gruha lakshmi Scheme Information
1.ಗೃಹಲಕ್ಷ್ಮಿ ಯೋಜನೆ ಎಂದರೇನು?
“ಗೃಹಲಕ್ಷ್ಮಿ ಯೋಜನೆ’ ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ
ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ.
2. ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಹಳೇ?
ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳ ಅರ್ಹಳು,
3.ಮನೆಯ ಯಜಮಾನಿ ಯಾರು?
ರೇಷನ್ ಕಾರ್ಡ್ ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯನ್ನು ಗ್ರಹಲಕ್ಷ್ಮಿ’ ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.
4. ಪಡಿತರ ಚೀಟಿಯಲ್ಲಿ ಅತ್ತೆ ಯಾಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದು, ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?
ಇಲ್ಲ . ಪಡಿತರ ಚೀಟಿಯಲ್ಲಿಯ ಯಜಮಾನಿಯೇ ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ,
5. ಕುಟುಂಬದ ಯಜಮಾನಿಯು ಇತ್ತೀಚೆಗೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?
ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.
6. ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಮುಂದಿನ ಕ್ರಮವೇನು?
ಕುಟುಂಬದ ಯಜಮಾನಿಯ ಮರಣ ಹೊಂದಿದಲ್ಲಿ ಯೋಜನೆಯ ಸೌಲಭ್ಯ
ಸ್ಥಗಿತಗೊಳಿಸಲಾಗುವುದು.
7. ಕುಟುಂಬದ ಮುಖ್ಯಸ್ಮರು ಮೃತ ಪಟ್ಟರು ಸಹ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯದಿರುವ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?
ನಿಮ್ಮ ಸಮೀರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.
8.ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸುವುದು ಹೇಗೇ?
ಅ) ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ ( , ಕರ್ನಾಟಕ ಒನ್, ಬೆಂಗಳೂರು ಒನ್
ಗ್ರಾಮ ಒಪ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ
ಕಛೇರಿಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು.
ಬ) ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾದ ಪ್ರಜಾ ಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.
9. ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಸೇವಾ ಕೇಂದ್ರಗಳಿಗೆ ಹೋಗದೇ ಪಡೆಯಬಹುದೇ?
ಹೌದು, ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ ಪ್ರಜಾಯತಿನಿಧಿಗಳು
ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.
10. ಗೃಹಲಕ್ಷ್ಮಿ ಯೋಜನೆ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು?
ರೇಷನ್ ಕಾರ್ಡ್ ಪುತಿ, ಯಜಮಾನಿ ಮತ್ತು ಆಕೆಯ ಪತಿಯ ಅಧಾರ್ ಕಾರ್ಡ್ ಪ್ರತಿ ಮತ್ತು ಯೋಜನೆಯ ನಗದು ಸೌಲಭ್ಯ ಪಡೆಯಲು ಇಚ್ಚಿಸುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ
ಅಗತ್ಯವಿದೆ.
ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯವಾಗಿ ಕೇಳುವ ಪುಶ್ನೆಗಳು 2023-24 Gruha lakshmi scheme information
11. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ?
ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸಂಪೂರ್ಣ ಉಚಿತ, (ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ!
12. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಯಾವಾಗ?
ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಕೊನೆಯ ದಿನಾಂಕದ ಮಿತಿಯಿಲ್ಲ, ಯಾವುದೇ ಸಮಯದಲ್ಲಿ ಬೇಕಿದ್ದರೂ ನೋಂದಾಯಿಸಬಹುದು.
13. ಗೃಹಲಕ್ಷ್ಮಿ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಜುಲೈ, 19 ರಂದು ಚಾಲನೆ ನೀಡಲಾಗುವುದು, ಆಗಸ್ಟ್ 15 ರ ನಂತರ ಫಲಾನುಭವಿಗಳು
ಮೊದಲ ಹಣಕಾಸು ನೆರವು ರೂ. 2000/- ಪಡೆಯಲಿದ್ದಾರೆ.
14.ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರೇ?
ಇಲ್ಲ. ಸದ್ಯದ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರಲ್ಲ.
15. ಕುಟುಂಬದ ಮುಖ್ಯಸ್ಥರಿಗಾಗಿ ನಾವು ಈಗ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಬಹುದೇ. (ಉದಾ: ಪತಿ ಕುಟುಂಬದ ಮುಖ್ಯಸ್ಥ)
ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು
ಸಂಪರ್ಕಿಸುವುದು.
ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯವಾಗಿ ಕೇಳುವ ಪುಶ್ನೆಗಳು 2023-24 Gruha lakshmi scheme information
16. ನೋಂದಣಿ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ?
ಹೌದು, ನೋಂದಣಿ ಸಮಯದಲ್ಲಿ ಮೆಸೇಜ್/ಎಸ್.ಎಂ.ಎಸ್ ಅನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ.
17. ಫಲಾನುಭವಿಗಳಿಗೆ ಹಣ ಹೇಗೆ ತಲುಪುತ್ತದೆ?
ಅರ್ಹ ಕುಟುಂಬದ ಯಜಮಾನಿಯ ಆದಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು
ವರ್ಗಾವಣೆ (DBT) ಅಥವಾ ಆಧಾರ್ ಲಿಂಕ್ ಆಗದಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ (RTGS)
ಮೂಲಕ ಮಾಸಿಕ ರೂ 2000/- ವಿತರಿಸಲಾಗುತ್ತದೆ,
18. ಕುಟುಂಬದ ಯಜಮಾನಿ ಬೇರೆ ಸದಸ್ಯರ ಬ್ಯಾಂಕ್ ಖಾತೆ ನೀಡಬಹುದಾ?
ಇಲ್ಲ, ಕುಟುಂಬದ ಯಜಮಾನಿ ತಮ್ಮದೇ ಬ್ಯಾಂಕ್ ಖಾತೆಯನ್ನು ನೀಡಬೇಕು.
19. ಗಂಡ ಮತ್ತು ಹೆಂಡತಿ ಜಂಟಿ ಖಾತೆಯನ್ನು ಹೊಂದಿದ್ದರೆ, ಜಂಟಿ ಖಾತೆ ವಿವರಗಳನ್ನು ನೊಂದಾಯಿಸಲು ಒದಗಿಸಬಹುದೇ?
‘ಇಲ್ಲ, ಯೋಜನೆಯಡಿ ನೋಂದಾಯಿಸಿಕೊಳ್ಳುವವರು ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಪಾಸ್ ಪುಸ್ತಕದ ಪ್ರತಿಯನ್ನು ಒದಗಿಸಬೇಕು,
20. ನಾನು ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ, ನಾನು ಗೃಹಲಕ್ಷ್ಮಿ ಯೋಜನೆಗೆ ಖಾತೆಯನ್ನು ಬಳಸಬಹುದೇ ?
ಹೌದು, ಬಳಸಬಹುದು.
21. ಮಗ/ಮಗಳು ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಐಟಿ ರಿಟರ್ನ್ಸ್ ಸಲ್ಲಿಸಿದರೆ, ತಾಯಿ ಗ್ರಹಲಕ್ಷ್ಮಿ ಯೋಜನೆಗೆ ಅರ್ಹರಾಗುತ್ತಾರೆಯೇ?
ಹೌದು ಅರ್ಹರಾಗುತ್ತಾರೆ.
22. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು?
ಈಗಾಗಲೇ ಪಾವತಿಸಲಾಗಿರುವ ಹಣವನ್ನು ಫಲಾನುಭವಿಗಳಿಂದ ವಸೂಲು ಮಾಡಲಾಗುವುದು ಮತ್ತು ಅಂತಹವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
23, ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು/ವಿಳಾಸ ಹೊಂದಿಕೆಯಾಗದಿದ್ದರೆ ಅಂತಹವರನ್ನು ನೊಂದಣಿ ಮಾಡಿಕೊಳ್ಳಲಾಗುತ್ತದೆಯೇ? ನೊಂದಣಿ ಪ್ರಕ್ರಿಯೆಗೊಳಿಸಲಾಗುತ್ತದೆಯೇ?
ಈಗಾಗಲೇ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿರುವುದರಿಂದ ಈ ಪ್ರಶ್ನೆ
ಉದ್ಭವಿಸುವುದಿಲ್ಲ.
24. ನನ್ನ, ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿತ್ತು. ಆದರೆ ಪ್ರಸ್ತುತ ಸದರಿ ಮೊಬೈಲ್ ಸಂಖ್ಯೆ ನಿಷ್ಕ್ರಿಯಗೊಂಡಿದೆ. ನಾನು ಹೇಗೆ ನೋಂದಾಯಿಸಬೇಕು?
ಆಧಾರ್ ಸಂಖ್ಯೆಗೆ ಜೋಡಣೆಯಾಗಿದ್ದ ಮೊಬೈಲ್ ಸಂಖ್ಯೆಯು ಪ್ರಸ್ತುತ ನಿಷ್ಕ್ರಿಯಗೊಂಡಿದಲ್ಲಿ ನೀವು ನೋಂದಣಿ ಕೇಂದ್ರಗಳಲ್ಲಿರುವ ಬಯೋಮೆಟ್ರಿಕ್ ಉಪಕರಣಕ್ಕೆ ನಿಮ್ಮ ಬೆರಳಚ್ಚು ನೀಡಿ, ಆಧಾರ್ ದೃಢೀಕರಣ ಮಾಡಬಹುದು.
25. ಯೋಜನೆಯಡಿ ನೊಂದಾಯಿಸಿಕೊಳ್ಳಲು ಗಂಡನ ವಿವರಗಳು ಕಡ್ಡಾಯವಾಗಿದೆ. ವಿಚ್ಛೇದನದ ಪ್ರಕರಣವು ಬಾಕಿ ಉಳಿದಿದ್ದರೆ ಅಥವಾ ನ್ಯಾಯಾಲಯದಲ್ಲಿ ಪ್ರಕ್ರಿಯೆಯಲ್ಲಿದ್ದರೆ ಏನು ಮಾಡಬೇಕು?
ಕಾನೂನು ರೀತಿ ವಿಚ್ಚೇದನ ಆಗಿದ್ದಲ್ಲಿ ಗಂಡನ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲ.
26.ನಾಗರಿಕರು ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವರು ನೊಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಹೌದು, ಅರ್ಹರಾಗುತ್ತಾರೆ.
27. ನಾಗರಿಕರು ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿದ್ದಾರೆ ಮತ್ತು ಪಿಂಚಣಿ ಪಡೆಯುತ್ತಿರುವವರು ಯೋಜನೆಗೆ ನೊಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದರೆ ಅರ್ಹರಾಗುತ್ತಾರೆ.
28. ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರಿರುವ ಪಡಿತರ ಚೀಟಿಗಳು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.
30.ಕುಟುಂಬದ ಮುಖ್ಯಸ್ಥರ ಆಧಾರ್ ಅನ್ನು ನವೀಕರಿಸದ ಮತ್ತು ಆಧಾರ್ ನೊಂದಿಗೆ ಜೋಡಣೆ ಮಾಡಿರದ ಪಡಿತರ ಚೀಟಿಗಳನ್ನು, ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಸಂಪರ್ಕಿಸಿ ಆಧಾರ್ ಅನ್ನು ನವೀಕರಿಸಿಕೊಳ್ಳುವುದು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಛೇರಿಯನ್ನು ಸಂಪರ್ಕಿಸಿ, ಪಡಿತರ ಚೀಟಿಗೆ ಜೋಡಣೆ ಮಾಡಿಸಿಕೊಳ್ಳುವುದು.
31. ತಡೆಹಿಡಿಯಲಾದ/ ರದ್ದುಗೊಳಿಸಿದ ಪಡಿತರ ಚೀಟಿಗಳನ್ನು ಯೋಜನಗೆ ಪರಿಗಣಿಸಲಾಗುತ್ತದೆಯೇ?
ಈ ಯೋಜನೆಗೆ ಅರ್ಹರಿರುವುದಿಲ್ಲ.
32. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆಯಾಗಿದ್ದು, ಪಡಿತರ ಚೀಟಿಯಲ್ಲಿ ಲಿಂಗ ಪುರುಷ ಎಂದು ನಮೂದಾಗಿದ್ದರೆ ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.
ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯವಾಗಿ ಕೇಳುವ ಪುಶ್ನೆಗಳು 2023-24 Gruha lakshmi scheme information
33. ಗೃಹಲಕ್ಷ್ಮಿ ನೋಂದಣಿಗಾಗಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ನಾನು ಎಲ್ಲಿ ತಿಳಿದುಕೊಳ್ಳಬಹುದು?
ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೋಂದಣಿ ವೇಳಾ ಪಟ್ಟಿಯ ಸಂದೇಶ ಕಳುಹಿಸಲಾಗಿದೆ. ಅಲ್ಲದೇ, ನಿಮ್ಮ ನೋಂದಣಿ ವೇಳಾ ಪಟ್ಟಿಯನ್ನು ನೀವು ಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು
ಎ) ನಿಮ್ಮ ವೇಳಾಪಟ್ಟಿಯನ್ನು ತಿಳಿಯಲು 1902 ಗೆ ಕರೆ ಮಾಡಿ ಹಾಗೂ ನೀಡಲಾಗುವ ಸೂಚನೆಗಳನ್ನು ಅನುಸರಿಸಿ.
(ಬಿ) ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147-500-500 11 SMS ಮಾಡಿ ಮತ್ತು ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದ ಮಾಹಿತಿ ಪಡೆಯಿರಿ,
(ಸಿ) ಪಡಿತರ ಚೀಟಿ ಸಂಖ್ಯೆಯನ್ನು ಬಳಸಿ, ಸೇವಾಸಿಂಧು ಪೋರ್ಟಲ್ ನಲ್ಲಿ ಹುಡುಕಿ,
34. ನನಗೆ ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸುವುದು ಅಗತ್ಯವೇ?
ಹೌದು, ಸುಗಮ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ವೇಳಾಪಟ್ಟಿಯನ್ನು ಮಾಡಲಾಗಿದೆ. ದಯವಿಟ್ಟು ನಿಗದಿಪಡಿಸಿದ ವೇಳಾ ಪಟ್ಟಿಯನ್ನು ಅನುಸರಿಸಿ.
35. ಸೂಚಿಸಿದ ದಿನಾಂಕ ಮತ್ತು ಸಮಯದಂದು ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಲು ನನಗೆ ಸಾಧ್ಯವಾಗಲಿಲ್ಲ. ನಾನು ಹೇಗೆ ನೋಂದಾಯಿಸಿಕೊಳ್ಳಬಹುದು?
ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸಲು ಸಾಧ್ಯವಾಗದಿದ್ದಲ್ಲಿ ನೀವು ಯಾವುದೇ ಕೆಲಸದ ದಿನದಂದು ಸಂಜೆ 5 ಗಂಟೆಯ ನಂತರ ನಿಮಗೆ ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ನೋಂದಾಯಿಸಿಕೊಳ್ಳಬೇಕು.
36. ನಾನು ಬೇರೆ ಗ್ರಾಮ / ಪಟ್ಟಣ / ತಾಲೂಕು ಅಥವಾ ಜಿಲ್ಲೆಗೆ ಸ್ಥಳಾಂತರಗೊಂಡಿದ್ದೇನೆ ಆದರೆ ನಾನು ಪಡಿತರ ಚೀಟಿಯಲ್ಲಿ ವಿಳಾಸವನ್ನು ನವೀಕರಿಸಿಲ್ಲ.
(ಎ) ನನ್ನ ನೋಂದಣಿಯನ್ನು ಎಲ್ಲಿ ನಿಗದಿಪಡಿಸಲಾಗುವುದು? ನಿಮ್ಮ ನೋಂದಣಿ ವೇಳಾಪಟ್ಟಿಯು ನಿಮ್ಮ ಪಡಿತರ ಚೀಟಿಯ ವಿಳಾಸಕ್ಕೆ ಸಮೀಪವಿರುವ ಕೇಂದ್ರದಲ್ಲಿರುತ್ತದೆ. ಹತ್ತಿರದ ಗ್ರಾಮ ಪಂಚಾಯತ್ ಕಛೇರಿ/ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್/ನಗರ ಸ್ಥಳೀಯ ಸಂಸ್ಥೆಯ ಆಡಳಿತ ಕಛೇರಿ)
ಬಿ) ನನ್ನ ಪ್ರಸ್ತುತ ವಸತಿ ಸ್ಥಳದಲ್ಲಿ ನೋಂದಾಯಿಸಲು ಸಾಧ್ಯವೇ? ಹೌದು, ವೇಳಾಪಟ್ಟಿಯ ಮೂಲಕ ದಾಖಲಾತಿಗಳು ಪೂರ್ಣಗೊಂಡ ನಂತರವೇ ಈ ಅವಕಾಶವನ್ನು ನೀಡಲಾಗುತ್ತದೆ. ಈ ಸೌಲಭ್ಯವು ಅಗತ್ಯ 2023 ರ 2ನೇ ವಾರದಲ್ಲಿ ಲಭ್ಯವಾಗಲಿದೆ)
c) ಪಡಿತರ ಚೀಟಿಯಲ್ಲಿ ನಮ್ಮ ಪ್ರಸ್ತುತ ವಿಳಾಸವನ್ನು ನವೀಕರಿಸಲು ನನಗೆ ಅವಕಾಶವಿದೆಯೇ? ದಯವಿಟ್ಟು ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಗೆ ಭೇಟಿ ನೀಡಿ
(ಡಿ) ನಾನು ಈಗ ಪಡಿತರ ಚೀಟಿಯಲ್ಲಿ ನನ್ನ ಪುಸ್ತುತ ವಿಳಾಸವನ್ನು ನವೀಕರಿಸಿದರೆ, ನನ್ನ ನೋಂದಣಿ ಕೇಂದ್ರವು ಸ್ವಯಂಚಾಲಿತವಾಗಿ ಹೊಸ ವಿಳಾಸಕ್ಕೆ ಬದಲಾಗುತ್ತದೆಯೆ? ಇಲ್ಲ, ಅಗಸ್ಟ್ 2 ನೇ ವಾರದ ನಂತರ ನಿಮಗೆ ಹತ್ತಿರವಿರುವ ಯಾವುದೇ ಕೇಂದ್ರದಲ್ಲಿ ದಾಖಲಾಗಲು ನಿಮಗೆ ಆಯ್ಕೆಯನ್ನು ನೀಡಲಾಗುತ್ತದೆ.
37. ನನ್ನ ಪಡಿತರ ಚೀಟಿಗಾಗಿ ನಾನು ವೇಳಾಪಟ್ಟಿಯನ್ನು ಹುಡುಕಿದಾಗ ನನ್ನ ಪಡಿತರ ಚೀಟಿಯನ್ನು ತಡೆಹಿಡಿಯಲಾಗಿದೆ/ರದು,ಗೊಂಡಿದೆ ಎಂದು ತೋರಿಸುತ್ತದೆ. ಗ್ರಹಲಕ್ಷ್ಮಿ. ಯೋಜನೆಗೆ ನಾನು ಅರ್ಹಳೇ?
ಇಲ್ಲ, ಸಕ್ರಿಯ ಪಡಿತರ ಚೀಟಿಗಳ ಯಜಮಾನಿ ಮಾತ್ರ ನೋಂದಣಿಗೆ ಅರ್ಹರು.
38. ನಾನು ಯಾವುದೇ ನೋಂದಣಿ ವೇಳಾಪಟ್ಟಿಯನ್ನು ಸ್ವೀಕರಿಸಿಲ್ಲ. ಆದರೆ 1 ಆಗಸ್ಟ್ 2023 ರ ನಂತರ ವರಿಶೀಲಿಸಲು ನನಗೆ ತಿಳಿಸಲಾಗಿದೆ. ಅದು ಏಕೆ?
ನೋಂದಣಿಗಾಗಿ ಪಡಿತರ ಚೀಟಿಗಳನ್ನು Random ಆಗಿ (ಯಾದೃಚ್ಛಿಕವಾಗಿ ಅವರಿಗೆ ಹತ್ತಿರವಿರುವ ವಿವಿಧ ಹಂತಗಳಲ್ಲಿ. ಮಾಡಲಾಗುತ್ತಿದೆ. ಆದ್ದರಿಂದ, ಮುಂದಿನ ಸುತ್ತಿನ ಹಂಚಿಕೆಯಲ್ಲಿ ನಿಯೋಜಿಸಬೇಕಾದ ಪಡಿತರ ಚೀಟಿಗಳನ್ನು 1 ಆಗಸ್ಟ್ 2003 ರ ನಂತರ ಪರಿಶೀಲಿಸಲು ತಿಳಿಸಲಾಗಿದೆ.
39. ನಾನು ಸಕ್ರಿಯ ಪರಿಸರ ಚೀಟಿಯನ್ನು ಹೊಂದಿದನ ಆದರೆ ಪುರುಷ ಸದಸ್ಯರು ಕುಟುಂಬದ ಮುಖ್ಯಸ್ಥರಾಗಿದ್ದಾರೆ. ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಹಳೇ?
ಇಲ್ಲ, ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಿದವರು ಮಾತ್ರ ಅರ್ಹರು
40. ನಾನು ಸಕ್ರಿಯ ಪಡಿತರ ಚೀಟಿಯನ್ನು ಹೊಂದಿದ್ದೇನೆ. ಆದರೆ ಅದರಲ್ಲಿ ಯಾವುದೇ ಸದಸ್ಯರನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿಲ್ಲ. ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಹಳೇ?
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಮರ ಮಾಹಿತಿಯನ್ನು ನವೀಕರಿಸಿದ ನಂತರ ನೀವು ನೋಂದಾಯಿಸಬಹುದು.
ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯವಾಗಿ ಕೇಳುವ ಪುಶ್ನೆಗಳು 2023-24 Gruha lakshmi scheme information
41. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೇನೆ ಆದರೆ ಇನ್ನೂ ನೀಡಿಲ್ಲ. ನಾನು ಯೋಜನೆಗೆ ನೋಂದಾಯಿಸಬಹುದೇ?
ನಿಮಗೆ ಪಡಿತರ ಚೀಟಿ ನೀಡಿದ ನಂತರ ನೀವು ನೋಂದಾಯಿಸಬಹುದು.
42. ನನ್ನ ಬಿಪಿಎಲ್/ಎಪಿಎಲ್ ಪಡಿತರ ಚೀಟಿ ರದ್ದುಗೊಂಡಿದೆ. ಆದರೆ ನನ್ನ ಕುಟುಂಬ ಕರ್ನಾಟಕದಲ್ಲಿ ವಾಸಿಸುತ್ತಿದೆ. ನಾನು ಯೋಜನೆಗೆ ನೋಂದಾಯಿಸಬಹುದೇ?
ಇಲ್ಲ, ಸಕ್ರಿಯ ಪಡಿತರ ಚೀಟಿಯಲ್ಲಿರುವ ಕುಟುಂಬದ ಮಹಿಳಾ ಯಜಮಾನಿ ಮಾತ್ರ ನೋಂದಾಯಿಸಬಹುದು.
43. ನಾನು ಮಹಿಳೆ ಮತ್ತು ಕುಟುಂಬದ ಯಜಮಾನಿ, ಆದರೆ ಆದಾಯ ತೆರಿಗೆ ಪಾವತಿಸುತ್ತಿದ್ದೇನ. ನಾನು ಯೋಜನೆಗೆ ಅರ್ಹಳೇ?
ಇಲ್ಲ, ಕುಟುಂಬದ ಯಜಮಾನಿ ಆದಾಯ ತೆರಿಗೆ ಪಾವತಿಸುತ್ತಿದಲ್ಲಿ ಯೋಜನೆಗೆ ಅರ್ಹರಲ್ಲ.
44. ನಾನು ಮಹಿಳೆ ಮತ್ತು ಕುಟಂಬದ ಯಜಮಾನಿ, ಆದರೆ GST ರಿಟರ್ನ್ ಸಲ್ಲಿಸುತ್ತಿದ್ದೇನೆ. ನಾನು ಯೋಜನೆಗೆ ಅರ್ಹಳೇ?
ಇಲ್ಲ. ಕುಟುಂಬದ ಯಜಮಾನಿ ಜಿ.ಎಸ್ಟಿ ರಿಟರ್ನ್ ಸಲ್ಲಿಸುತ್ತಿದ್ದಲ್ಲಿ ಯೋಜನೆಗೆ ಅರ್ಹರಲ್ಲ.
45. ನಾನು ಕುಟುಂಬದ ಮಹಿಳಾ ಯಜಮಾನಿ ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ನಾನು ಯೋಜನೆಗೆ ಅರ್ಹಳೇ?
ಇಲ್ಲ. ಕುಟುಂಬದ ಯಜಮಾನಿ ಪತಿ ಆದಾಯ ತೆರಿಗೆ ಸಲ್ಲಿಸುತ್ತಿದ್ದಲ್ಲಿ ಯೋಜನೆಗೆ ಅರ್ಹರಲ್ಲ.
46. ನಾನು ಕುಟುಂಬದ ಮಹಿಳಾ ಯಜಮಾನಿ ಮತ್ತು ನನ್ನ ಪತಿ GST ರಿಟರ್ನ್ ಸಲ್ಲಿಸುತ್ತಿದ್ದಾರೆ. ನಾನು ಯೋಜನೆಗೆ ಅರ್ಹಳೇ?
ಇಲ್ಲ. ಕುಟುಂಬದ ಯಜಮಾನಿ ಪತಿ ಜಿಎಸ್.ಟಿ ರಿಟರ್ನ್ ಸಲ್ಲಿಸುತ್ತಿದ್ದಲ್ಲಿ ಯೋಜನೆಗೆ ಅರ್ಹರಲ್ಲ
47. ನನಗೆ ನೋಂದಣಿಗಾಗಿ ನಿಗದಿಪಡಿಸಿದ ಕೇಂದ್ರವು ನನ್ನ ಗ್ರಾಮಗ್ರಾಮ ಪಂಚಾಯತ್ನ ಹೊರೆಗಿದೆ ಏಕೆ ?
ಸಧ್ಯವಾದಷ್ಟು ನಿಮ್ಮ ಪಡಿತರ ಚೀಟಿಯ ವಿಲಾಸದನ್ವಯ ನೋಂದಣಿ ಕೇಂದ್ರಗಳನ್ನು
ನಿಗದಿಪಡಿಸಲಾಗಿದೆ. ಅದು ಸಾಧ್ಯವಿಲ್ಲದ ಕಡೆ ನೀವು ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಇತರ ಗ್ರಾಮ ಪಂಚಾಯತಿಯ ನೋಂದಣಿ ಕೇಂದ್ರವನ್ನು ನಿಗದಿಪಡಿಸಲಾಗಿದೆ.
48. ನನಗೆ ನಿಯೋಜಿಸಲಾದ ಕೇಂದ್ರಕ್ಕೆ ಭೇಟಿ ನೀಡಲು ಅನಾರೋಗ್ಯದ ಕಾರಣದಿಂದ ಅಥವಾ ದೂರ ಇರುವುದರಿಂದ ನೋಂದಾಯಿಸಲು ಸಾಧ್ಯವಾಗುವುದಿಲ್ಲ, ನಾನು ಹೇಗೆ ನೋಂದಾಯಿಸಬಹುದು?
ಗೃಹಲಕ್ಷ್ಮಿ, ಯೋಜನೆಯ ಸಂಪೂರ್ಣ ಯಶಸ್ವಿಗಾಗಿ ಸರ್ಕಾರವು ಅದೇ ಗ್ರಾಮದ ಪ್ರಜಾ
ಪ್ರತಿನಿಧಿಗಳನ್ನು ನೇಮಿಸುತ್ತಿದೆ, ಅವರು ನೋಂದಣಿಗಾಗಿ ಮನೆಗಳಿಗೆ ಭೇಟಿ ನೀಡುತ್ತಾರೆ.
ನೀವು ಅವರ ಸಹಾಯದಿಂದ ನೋಂದಾಯಿಸಿಕೊಳ್ಳಬಹುದು.
Leave a Comment