ಐಫೋನ್ ಕೊಳ್ಳಲು 8 ತಿಂಗಳ ಮಗುವನ್ನು ಮಾರಿದ ದಂಪತಿ
ಕೋಲ್ಕತಾ: ಇನ್ಸ್ಟಾಗ್ರಾಂ ರೀಲ್ಸ್ ಮಾಡಲು, ಐಫೋನ್ 14 ಖರೀದಿ ಮಾಡಲು, ಜೋಡಿಯೊಂದು ತಮ್ಮ 8 ತಿಂಗಳ ಮಗುವನ್ನು ಮಾರಾಟ ಮಾಡಿದ ಭಯಾನಕ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಇನ್ಸ್ಟಾಗ್ರಾಂನಲ್ಲಿ ಕಂಟೆಂಟ್ ಸೃಷ್ಟಿ ಮಾಡಲು ರಾಜ್ಯಾದ್ಯಂತ ಪ್ರವಾಸ ಹೋಗಲು ನಿರ್ಧರಿಸಿದ್ದ ದಂಪತಿ, ರೀಲ್ಸ್ ಮಾಡುವುದ ಕ್ಕಾಗಿ ಐಫೋನ್ ಖರೀದಿಸಲು ಬಯಸಿದ್ದರು. ಹಾಗಾಗಿ ಮಗುವನ್ನು ಮಾರಾಟ ಮಾಡಿ ದರು ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಐಫೋನ್ ಕೊಳ್ಳಲು 8 ತಿಂಗಳ ಮಗುವನ್ನು ಮಾರಿದ ದಂಪತಿ
ಉತ್ತರ 24 ಪರಗಣ ಜಿಲ್ಲೆಯ ಜಯದೇವ್ ಘೋಷ್ ಮತ್ತು ಸತಿ ಎಂಬ ದಂಪತಿ ಈ ಕೃತ್ಯ ಎಸಗಿದ್ದು,ಜಯದೇವ್ ಓಡಿ ಹೋಗಿದ್ದು, ಆತನಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸತಿ ಹಾಗೂ ಮಗುವನ್ನು ಖರೀದಿಸಿದ ಪ್ರಿಯಾಂಕ ಘೋಷ್ ಎಂಬುವವರ ಪೊಲೀಸರು ಬಂಧಿಸಿದ್ದಾರೆ.
8 ತಿಂಗಳ ಮಗು ವನ್ನು 2 ಲಕ್ಷ ರು.ಗೆ ಮಾರಾಟ ಮಾಡಿದ್ದರು. ಈ ಹಣದಲ್ಲಿ ಅವರು ಪ್ರವಾಸ ಹೋಗಿದ್ದ ಲ್ಲದೇ, ಹೊಸ ಮೊಬೈಲ್ ಖರೀದಿಸಿದ್ದರು ಎಂದು ನೆರೆಮನೆಯವರು ಹೇಳಿದ್ದಾರೆ.
Leave a Comment