1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ
ಯಲ್ಲಾಪುರ:
ಕಾಳಮ್ಮನಗರದ ವಿದ್ಯಾರ್ಥಿ ಅಮಿತ ಕಮ್ಮಾರ ಎಂಬಾತ ಮೋಸ ಹೋದ ವಿದ್ಯಾರ್ಥಿ
ವಿದ್ಯಾರ್ಥಿಯಿಂದ ಅಪರಿಚಿತರು ತಮ್ಮ ಖಾತೆಗೆ 1.61 ಲಕ್ಷ ರೂಪಾಯಿ ಹಾಕಿಸಿಕೊಂಡು ಮರಳಿ ನೀಡದೇ ವಂಚಿಸಿರುವ ಘಟನೆ ತಡವಾಗಿ ವರದಿಯಾಗಿದೆ. .
ಈತನ ಮೊಬೈಲ್ ಫೋನ್ಗೆ ಕಳೆದ ಮೇನಲ್ಲಿ ಯಾರೋ ಅಪರಿಚಿತರು ವಾಟ್ಸ್ ಆಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಅಮಿತ ಖಾತೆಗೆ 20 ಸಾವಿರ ರೂ.ಗಳಂತೆ 4 ಬಾರಿ ಹಣ ಹಾಕಿದ್ದಾರೆ. ಬ
ಳಿಕ ಅಮಿತ್ನಿಂದ 1.61 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಕುರಿತು ಅಮಿತ್ ಜು. 29ರಂದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
Leave a Comment