ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು
ಶಿರಸಿ: ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು ಖಾತೆಯಲ್ಲಿದ್ದ ಸುಮಾರು 1.23 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅವರ ಮೊಬೈಲ್ ನಂಬರ್ಗೆ ಲಿಂಕ್ನ್ನು ಕಳುಹಿಸಿ, ಅದನ್ನು ಭರಣ ಮಾಡುವಂತೆ ಸೂಚಿಸಿದ್ದಾರೆ.
ಪಾನ್ಕಾರ್ಡ್ ಮತ್ತು ಓಟಿಪಿಯನ್ನು ಲಿಂಕ್ನಲ್ಲಿ ಭರ್ತಿ ಮಾಡುವಂತೆ ಹೇಳಿದ್ದಾರೆ. ನ್ಯಾಯಾಧೀಶರು ಒಟಿಪಿ ಹಾಕುತ್ತಿದ್ದಂತೆ ಖಾತೆಯಲ್ಲಿದ್ದ 1,23,514 ರೂ. ವರ್ಗಾವಣೆಯಾಗಿದೆ. ಈ ಕುರಿತು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment