ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ
ಯಲ್ಲಾಪುರ: ಹಿತ್ತಳ್ಳಿ ಮರ್ಲೆಮನೆಯ ನಿವಾಸಿ ಮಹೇಶ್ ರಾಮಾ ಸಿದ್ದಿ (20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂದ್ರ ಸಿದ್ದಿ ಬಂಧಿತ ಆರೋಪಿಗಳು.
ಹಿತ್ತಳ್ಳಿ ಗ್ರಾಮದ ನಿವಾಸಿ ಹರಿಹರ ವಿ. ಹೆಗಡೆ ಎನ್ನುವವರ ತೋಟದಲ್ಲಿದ್ದ 13,500 ರೂ. ಮೌಲ್ಯದ 3 ಜೇನು ಪೆಟ್ಟಿಗೆಗಳು ಕಳ್ಳತನವಾದ ಕುರಿತು ಆ.6 ರಂದು ಪಟ್ಟಣದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈರ್ವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
Leave a Comment