ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|honavar job 2023
ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ . ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ಹುದ್ದೆಗಳ ವಿವರ :
ಹುದ್ದೆಯ ಹೆಸರು /ಹುದ್ದೆಗಳ ಸಂಖ್ಯೆ
ಸಹಾಯಕ ಕಾರ್ಯನಿರ್ವಾಹಕ / ಮುಖ್ಯ ಲೆಕ್ಕಿಗ : ೦1
ಮುಖ್ಯ ಲೆಕ್ಕಿಗ : ೦1
ಮೇಲ್ವಿಚಾರಕ : 01
ಗುಮಾಸ್ತ : 02
ಸ್ವಚ್ಛತೆಗಾರ : 03
ಒಟ್ಟು 07 ಹುದ್ದೆ
ವೇತನ ಶ್ರೇಣಿ : ಮಾಸಿಕ ಗೌರವ ಧನದ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ
ವಿದ್ಯಾರ್ಹತೆ :
ಸಹಾಯಕ ಕಾರ್ಯನಿರ್ವಾಹಕ / ಮುಖ್ಯ ಲೆಕ್ಕಿಗ : ಬಿ.ಕಾಂ., ಪದವಿ , ಟ್ಯಾಲಿ , ಮತ್ತು ಕಂಪ್ಯೂಟರ್ ಡಾಟಾ ಎಂಟ್ರಿ ತರಬೇತಿ ಹೊಂದಿರಬೇಕು .
ಮುಖ್ಯ ಲೆಕ್ಕಿಗ : ಬಿ.ಕಾಂ., ಪದವಿ , ಟ್ಯಾಲಿ , ಮತ್ತು ಕಂಪ್ಯೂಟರ್ ಡಾಟಾ ಎಂಟ್ರಿ ತರಬೇತಿ ಹೊಂದಿರಬೇಕು .
ಮೇಲ್ವಿಚಾರಕ : ಪಿ.ಯು.ಸಿ.
ಗುಮಾಸ್ತ : ಪಿ.ಯು.ಸಿ.
ಸ್ವಚ್ಛತೆಗಾರ : 8 ನೇ ತರಗತಿ ಪಾಸಾಗಿರಬೇಕು .
ವಯೋಮಿತಿ :
ಕನಿಷ್ಠ18ವರ್ಷ ಹಾಗೂ ಗರಿಷ್ಠ 40 ವರ್ಷದೊಳಗಿರಬೇಕು .
ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|honavar job 2023
ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು :
ಅರ್ಜಿ ಸಲ್ಲಿಸಲು ಬಯಸುವವರು ಅಂದವಾದ ಕೈ ಬರಹದಲ್ಲಿ ಅಥವಾ ಟೈಪ್ ಮಾಡಿದ ಅರ್ಜಿಯನ್ನು ಬಯೋ-ಡೇಟಾ , ಮೊಬೈಲ್ ಸಂಖ್ಯೆ , ಅಂಕಪಟ್ಟಿ , ಮತ್ತಿತರ ದಾಖಲಾತಿಗಳ ದೃಢೀಕೃತ ಪ್ರತಿಗಳು ಮತ್ತು ಇತ್ತಿಚೀನ ಪಾಸ್ಪೋರ್ಟ ಅಳತೆಯ ಭಾವಚಿತ್ರಗಳೊಂದಿಗೆ ( ಒಂದನ್ನು ಅರ್ಜಿಯ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ಅಚಿಟಿಸಿ ) ಅಕ್ಟೋಬರ್ 21 ಸಂಜೆ 5.30 ಗಂಟೆಯೊಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕರವಾರ ಇಲ್ಲಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು . ಅಕ್ಟೋಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕರವಾರದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನಕ್ಕೆ ಪ್ರತ್ಯೇಕವಾಗಿ ನೋಟಿಸು ಅಥವಾ ಪತ್ರವನ್ನು ಕಳುಹಿಸಲಾಗುವುದಿಲ್ಲ . ಅನಿವಾರ್ಯ ಕಾರಣಗಳಿಂದ ಸಂದರ್ಶದ ದಿನಾಂಕವನ್ನು ರದ್ದುಗೊಳಿಸಿದರೆ / ಮುಂದೂಡಿದರೆ ಅದರ ಸೂಚನೆಯನ್ನು ಜಿಲ್ಲಾ ನ್ಯಾಯಾಲಯದ ಸೂಚನ ಫಲಕದಲ್ಲಿ ಮತ್ತು ವಿನಾಯಕ ದೇವಾಲಯ ಇಡಗುಂಜಿ ದೇವಸ್ಥಾನದ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು ಎಂದು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Leave a Comment