ವರ್ಕ್ ಫ್ರಾಮ್ ಹೋಮ್ ಹೆಸರಲ್ಲಿ ವಂಚನೆ
ಶಿರಸಿ:
ಮನೆಯಿಂದಲೇ ಕೆಲಸ ಮಾಡುವ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ ಬೇರೆ ಬೇರೆ ಟಾಸ್ಕ್ ಗಳಿಗೆ ಹಣ ಹೂಡುವಂತೆ ನಂಬಿಸಿ, 1,62,800 ರೂ. ಮೋಸ ಮಾಡಿದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದಲೇ ಕೆಲಸ ಮಾಡುವ ಆಸೆ ತೋರಿಸಿ ಗಾಂಧಿನಗರದ ಅಂಬಾಗಿರಿ ದೇವಸ್ಥಾನದ ಎದುರಿನ ನಿವಾಸಿ ಎಂಜಿನಿಯರ್ ರೋಶನ್ ವಸಂತ
ನಾಯ್ಕ (28) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೇರೆ ಬೇರೆ ಟಾಸ್ಕ್ಗಳಿಗೆ ಹಣ ಹೂಡುವಂತೆ ನಂಬಿಸಿ, ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆಗೆ 15 ಸಾವಿರ ರೂ, ಹಾಗೂ ರತ್ನಾಕರ ಬ್ಯಾಂಕ್ ಲಿಮಿಟೆಡ್ ಖಾತೆಗೆ 49,800 ರೂ., ಪಂಜಾಬ ನ್ಯಾಶನಲ್ ಬ್ಯಾಂಕ್ ಖಾತೆಗೆ 98,000 ರೂ. ಒಟ್ಟೂ 1,62,800 ಹಣವನ್ನು ಹೊಡಿಕೆ ಮಾಡಿಸಿಕೊಂಡು ಮೋಸ ಮತ್ತು ವಂಚನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ReplyForwardAdd reaction |
Leave a Comment