ಕಡಲಾಮೆಯ ಮೊಟ್ಟೆ ಪತ್ತೆ
ಕಡಲಾಮೆಯ ಮೊಟ್ಟೆ ಪತ್ತೆ;ಕಾಸರಕೋಡ ಟೊಂಕ ದಲ್ಲಿ ದಿನಾಂಕ 24/12/24 ಮಂಗಳವಾರ ಬೆಳಿಗ್ಗೆ 5.00 ಘಂಟೆಗೆ ಕಡಲಾಮೆಯ ಮೊಟ್ಟೆ ಪತ್ತೆಯಾಗಿದೆ ಸ್ಥಳಿಯ ಮಿನುಗಾರರಿಂದ ಅರಣ್ಯ ಇಲಾಖೆಗೆ ತಿಳಿಸಿದ ನಂತರ ಅರಣ್ಯ ಇಲಾಖೆಯ ಸಿಬಂದಿ ಮಂಜುನಾಥ ನಾಯ್ಕ ರವರ ನೇತ್ರತ್ವದಲ್ಲಿ ಸ್ಥಳ ದಾಖಲಿಸಿ ಕಡಲಾಮೆ ಗೂಡನ್ನು ಸಂರಕ್ಷಿಸಲಾಯಿತು.
ಕಡಲಾಮೆಗಳು ಈ ಸಲದ ಅಕಾಲಿಕ ಮಳೆಯಿಂದ ಮೊಟ್ಟೆ ಇಡಲು ಒಂದು ತಿಂಗಳು ಮುಂದುಡಿ ತೊಂದರೆಗೊಳಗಾಗಿತ್ತು. ಹೊನ್ನಾವರ ಅರಣ್ಯ ವಲಯದ ಕಡಲಾಮೆ ಮೊಟ್ಟೆ ಇಡುವ ಸಿಜನ್ (ಕಾಲದ) ಪ್ರಥಮ ವರದಿಯಾದ್ದರಿಂದ ಟೊಂಕಾ ಖಾರ್ವಿ ಮೀನುಗಾರ ವಾಡೆ ಬುಧವಂತ ರಾದ ರಾಜೇಶ ತಾಂಡೇಲ್ ಮತ್ತು ಸಮಸ್ತರು ಶುಭಕಾಲದ ಸಂತೋಷವನ್ನು ಹಂಚಿಕೊಂಡರು.’
ಅರಣ್ಯ ಅಧಿಕಾರಿ ಗಳ ತಂಡ ಸ್ಥಳಕ್ಕೆ ಧಾವಿಸಿ ಕಡಲಾಮೆಯ ಹೆಜ್ಜೆಗುರುತು, ಹಾಗೂ ಮೊಟ್ಟೆ ಗಳನ್ನ ಪರಿಸಿಲಿಸಿದರು. ಖ್ಯಾತ ವೈಜ್ಞಾನಿಕ ಲೇಖಕರಾದ ಶ್ರೀ ನಾಗೇಶ ಹೆಗಡೆ, ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ ಸ್ಥಳ ಸಂದರ್ಶಿಸಿದರು . ಹೊನ್ನಾವರ ಫೌಂಡೇಶನ್ ನ ಕಾರ್ಯಕರ್ತರು ಹಾಗೂ ಶ್ರೀ ಜೈನ ಓಟಕೇಶ್ವರ ಯುವಕ ಸಮಿತಿ ಟೊಂಕಾ ರಮೇಶ ತಾಂಡೇರ್ ಹಾಗು ಬಾಸ್ಕರ್ ತಾಂದೇಲ್ ಸರಂಕ್ಷಣಾ ಕಾರ್ಯದ ಸಮಯ ಹಾಜರಿದ್ದು ಸಹಕಾರ ನೀಡಿದರು
Leave a Comment