ದಾಲ್ಚಿನ್ನಿ ಕೃಷಿ ಅನುಭವ
ತೋಟಗಾರಿಕೆ ಇಲಾಖೆ, ಸಿದ್ದಾಪುರ
ದಿನೇಶ ಗೌಡ ರವರು ಕುಣಜಿ ಗ್ರಾಮದಲ್ಲಿ 2000 ಇಸವಿಯ ಮೇ
ತಿಂಗಳಲ್ಲಿ ಸಿಲೋನ್ ತಳಿಯ ದಾಲ್ಚಿನ್ನಿ ಸಸಿಗಳನ್ನು 15 ಅಡಿ*13 ಅಡಿ ಅಂತರದಲ್ಲಿ (1-20-00 ಕ್ಷೇತ್ರ) ನಾಟಿ ಮಾಡಿದರು. ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಹೂ ಬಿಡಲಾರಂಭಿಸಿತು. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳು ಹೂ ಬಿಡುವ ಸಮಯ. ಹೂ ಬಂದು ಮೊಗ್ಗು ಬಲೆಯಲು ಎರಡು ತಿಂಗಳು(ಫೆಬ್ರವರಿ-ಮಾರ್ಚ್) ಬೇಕಾಗುತ್ತದೆ.
ಕೊಯ್ದು ಮಾಡಿದ ಮೊಗ್ಗನ್ನು ಮೂರು ದಿನ ಬಿಸಿಲಿನಲ್ಲಿ ಒಣಗಿಸಬೇಕು ಹಾಗೂ ನಂತರ ಕಾಲಿನಿಂದ ತುಳಿದು ಮೊಗ್ಗನ್ನು ತೊಟ್ಟಿನಿಂದ ಬೇರ್ಪಡಿಸಬೇಕು. ಮೊಗ್ಗನ್ನು ಕೋಯ್ತು ಮಾಡಲು ಹೆಚ್ಚಿನ ಕೂಲಿಕಾರರ ಅವಶ್ಯಕತೆ ಇದೆ. ಮಕ್ಕಳು ಮತ್ತು ಹೆಂಗಸರು ಮೊಗ್ಗನ್ನು ಕೊಯ್ದು ಮಾಡಬಹುದು.
ದಾಲ್ಚಿನ್ನಿ ಎಲೆಯನ್ನು ಕೊಯ್ದು, ಮಾಡಿ ಒಣಗಿಸಿ ಮಾರಾಟ ಮಾಡಬಹುದು, ಆದರೆ ಈಗ ಎಲೆಯ ದರ ಪ್ರತಿ ಕೆ.ಜಿ ಗೆ ರೂ.20 ಇರುವುದರಿಂದ ಲಾಭದಾಯಕವಲ್ಲ.
ಪ್ರತಿ ಗಿಡದಿಂದ ಸರಾಸರಿ 1 ಕೆ.ಜಿ ಮೊಗ್ಗು ಲಭ್ಯವಾಗುತ್ತದೆ. ಮೊದಲು ಪ್ರತಿ ಕೆ.ಜಿ ಗೆ ರೂ. 500 ದರ ಇತ್ತು. ಈಗ ರೂ.1200 ಪ್ರತಿ ಕೆ.ಜಿ ದರ. ಪ್ರತಿ ಗಿಡದ ನಿರ್ವಹಣೆಗೆ ಅಂದಾಜು ರೂ.500 ವೆಚ್ಚ ತಗಲುತ್ತದೆ. ಆರ್ಥಿಕವಾಗಿ ಉತ್ತಮ ಆದಾಯ 10 ವರ್ಷದ ನಂತರ ಲಭ್ಯವಾಗುತ್ತದೆ. ಇಳುವರಿಯಲ್ಲಿ ಕೆಲವೊಮ್ಮೆ ಏರಿಳಿತಗಳು ಆಗುತ್ತದೆ.
ದಾಲ್ಚಿನ್ನಿ ಗಿಡವನ್ನು ನಾಟಿ ಮಾಡಿದ ಮೊದಲ 2 ವರ್ಷ ಜನವರಿ ನಂತರ
ನೀರನ್ನು ನೀಡಿ ಮಳೆಗಾಲದ ಪ್ರಾರಂಭದವರೆಗೆ ಕಾಪಾಡಿಕೊಳ್ಳಬೇಕಾಗುತ್ತದೆ. ನಂತರದ ವರ್ಷಗಳಲ್ಲಿ ನೀರನ್ನು ನೀಡಿದರೆ ಉತ್ತಮ ಫಸಲನ್ನು ಪಡೆಯಲು ಅವಕಾಶವಿರುತ್ತದೆ.
ದಾಲ್ಚಿನ್ನಿ, ಬೆಳೆಗೆ ಮಂಗ, ನವಿಲು, ಹಂದಿ ಇತ್ಯಾದಿಗಳ ಉಪಟಳವಿರುವುದಿಲ್ಲ. ಕೊಯ್ದು ಮಾಡಲು ಸಾಕಷ್ಟು ಸಮಯ ಬೇಕಾಗುವುದರಿಂದ ಕಳ್ಳರ ಹಾವಳಿಯೂ ಕಡಿಮೆ. ಕಾಂಡಕೊರಕ ಹುಳುವಿನ ಸಮಸ್ಯೆ ಕೆಲವೊಂದು ಮರಗಳಲ್ಲಿ ಕಾಣಿಸಿಕೊಂಡಿದೆ.
ಹುಳುವಿನ ಸಮಸ್ಯೆ ಬಹಳ ಗಂಭೀರವಾದದಲ್ಲ ದಾನಿಯನ್ನು ನಾಟಿ ಮಾಡಿದಾಗ ಅನಾನಸ್ ಬೆಳೆ ಇದ್ದ ಕಾರಣ ಹಾಗೂ ಈಗ ಅಡಿಕೆಯನ್ನು ನಾಟಿ ಮಾಡಿದ ಕಾರಣ ಪ್ರತ್ಯೇಕವಾಗಿ ಪೋಷಕಾಂಶಗಳನ್ನು ಗೊಬ್ಬರ ಅಥವಾ ರಸಗೊಬ್ಬರದ ರೂಪದಲ್ಲಿ ನೀಡುತ್ತಿರುವುದಿಲ್ಲ.
ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ಪೋಷಕಾಂಶ ಹಾಗೂ ನೀರಾವರಿ ಸೌಲಭ್ಯ ಒದಗಿಸಿದರೆ ಹೆಚ್ಚಿನ ಲಾಭ ಪಡೆಯಬಹುದು, ಗಿಡಗಳನ್ನು 6-8 ಅಡಿ ಎತ್ತರಕ್ಕೆ ಸವರಿ ನಿರ್ವಹಣೆ ಮಾಡಿದರೆ ಕೊಯ್ದು ಮಾಡುವುದು ಸುಲಭ.
ಇಲಾಖೆಯಿಂದ ಲಭ್ಯವಿರುವ ಸೌಲಭ್ಯ :
ನರೇಗಾ ಯೋಜನೆಯಡಿ 33 ಮೀಟರ್ ಅಂತರದಲ್ಲಿ ಎಕರೆಗೆ 444 ಗಿಡಗಳನ್ನು ನಾಟಿ ಮಾಡಿದ ರೈತರು ರೂ.55990( ರೂ.48730 ಕೂಲಿ ವೆಚ್ಚ+ರೂ. 7260 ಸಸಿವೆಚ್ಚ) ಸಹಾಯಧನವನ್ನು ಮಾರ್ಗಸೂಚಿ ಅನುಸಾರ ಪಡೆಯಲು ಅವಕಾಶವಿರುತ್ತದೆ.
• ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರತಿ ಎಕರೆಗೆ ರೂ. 4000 ಸಹಾಯಧನ ಮಾರ್ಗಸೂಚಿ ಹಾಗೂ ಅನುದಾನ ಲಭ್ಯತೆ ಪ್ರಕಾರ ಪಡೆಯಲು ಅವಕಾಶವಿರುತ್ತದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನವನ್ನು ಹನಿ/ತುಂತುರು ನೀರಾವರಿ ವ್ಯವಸ್ಥೆ ಅಳವಡಿಕೆಗೆ ಪಡೆಯಬಹುದಾಗಿದೆ.
ವೆಚ್ಚ ರೂ. 7260 ಸಸಿವೆಚ) ಸಹಾಯಧನವನ್ನು ಮಾರ್ಗಸೂಚಿ ಅನುಸಾರ ಪಡೆಯಲು ಅವಕಾಶವಿರುತ್ತದೆ.
Leave a Comment