ಬೋನಿಗೆ ಬಿದ್ದ ಚಿರತೆ
ಹೊನ್ನಾವರ: ತಾಲೂಕಿನ ಕಡ್ಲೆ
ಗ್ರಾಮದ ವಂದೂರು ಜಡ್ಡಿಗದ್ದೆಯ ಸಮೀಪ ಅರಣ್ಯ ಇಲಾಖೆಯಿಂದ ಇಡಲಾದ ಬೋನಿನಲ್ಲಿ ಶನಿವಾರ ಚಿರತೆ ಬಂಧಿಯಾಗಿದೆ.
ತಾಲೂಕಿನ
గ్రామీణ ಭಾಗದಲ್ಲಿ ಇತ್ತೀಚಿನ ವರ್ಷದಲ್ಲಿ ಕಾಡುಪ್ರಾಣಿಗಳ ಹಾವಳಿಯು ವಿಪರೀತವಾಗಿತ್ತು. ಹೊಸಾಕುಳಿ, ಸಾಸ್ಕೋಡ ಹಾಗೂ ಕಡ್ಲೆ ಗ್ರಾಮದಲ್ಲಿ ಚಿರತೆ ಕಾಟಕ್ಕೆ ಹೆಚ್ಚಾಗಿತ್ತು.
ಗ್ರಾಮಗಳಿಗೆ
ಆಗಮಿಸಿ ಸಾಕುಪ್ರಾಣಿಯಾದ ಆಕಳು ಹಾಗೂ ನಾಯಿಗಳನ್ನು ಎಳೆದೊಯ್ಯುತ್ತಿತ್ತು.
ಅರಣ್ಯ ಇಲಾಖೆ ಬೋನು ಇಟ್ಟರೂ ಚಿರತೆ ಬೀಳುತ್ತಿರಲಿಲ್ಲ. ಶನಿವಾರ ಬೆಳಗ್ಗೆ ವಂದೂರು ಸಮೀಪ ಕೊನೆಗೂ ಚಿರತೆ ಬೋನಿಗೆ ಬಿದ್ದಿದ್ದು, ಈ ಭಾಗದ ನಿವಾಸಿಗಳ ಆತಂಕವು ದೂರವಾಗಿದೆ. ಬೋನಿಗೆ ಬಿದ್ದ ಚಿರತೆಯನ್ನು ದೂರದ ದಟ್ಟ ಅರಣ್ಯಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Leave a Comment