ರೈತರ ಮಕ್ಕಳಿಗೆ ಸುವರ್ಣಾವಕಾಶ
ತೋಟಗಾರಿಕೆ ಇಲಾಖೆಯ ತೋಟಗಾರಿಕೆ ವಿಸ್ತರಣೆ ಯೋಜನೆಯಡಿ 2025-26 ನೇ ಸಾಲಿನಲ್ಲಿ ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಗೆ ಹೊಸೂರು ತರಬೇತಿ ಕೇಂದ್ರ- ಸಿದ್ದಾಪುರ (ಉ.ಕ) ಇಲ್ಲಿ 10-ತಿಂಗಳ ಉಚಿತ ವಸತಿ ಸಹಿತ ತರಭೇತಿ (02-05-2025 ರಿಂದ) ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿಯಿಂದ ಎನು ಲಾಭ:
1. ತೋಟಗಾರಿಕೆ ಇಲಾಖೆಯ “ಗಾರ್ಡನ್ರ” ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆಯಾಗಬಹುದು.
2. ಸ್ವಂತ ಜಮೀನಿನ ಅಭಿವೃದ್ಧಿ ಮಾಡಬಹುದು ಮತ್ತು ಕಸಿ ಕಟ್ಟುವುದು, ಕಟ್ಟಿಂಗ್ಸ್, ಗೂಟಿ ವಿಧಾನಗಳಿಂದ ಸಸ್ಯಾಭಿವೃದ್ಧಿ ನಡೆಸಿ ಖಾಸಗಿ ನರ್ಸರಿ ಮಾಡಬಹುದಾಗಿದೆ.
3. ಬೇರೆ ಬೇರೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಬಹುದು.
4. ಖಾಸಗಿ ನರ್ಸರಿ, ಎಸ್ಟೇಟ್ ಗಳಲ್ಲಿ ಮೇಲ್ವಿಚಾರಕರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಬಹುದು.
ಏನೆಲ್ಲಾ ಸೌಲಭ್ಯಗಳು…!
1) 10-ತಿಂಗಳ ಉಚಿತ ತರಬೇತಿ
2) ತರಭೇತಿ ಪಡೆಯುವವರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ
3) ಪ್ರತಿ ತಿಂಗಳು “ಮಾಸಿಕ ಭತ್ಯೆ’
4) ನುರಿತ ಪರಿಣಿತರಿಂದ ಪ್ರಾಯೋಗಿಕ ತರಬೇತಿ
5) 5 ದಿನಗಳ ಶೈಕ್ಷಣಿಕ ಕರ್ನಾಟಕ ಪ್ರವಾಸ
6) ವಿವಿಧ ಕೆಂದ್ರಗಳಲ್ಲಿ, ಪೂರಕ ತರಬೇತಿ
ಅರ್ಹತೆಗಳು:
1. ರೈತರ ಮಕ್ಕಳಿಗೆ ಮಾತ್ರ ಅವಕಾಶ
2. SSLC ಪಾಸಾಗಿರಬೇಕು
ತಕ್ಷಣ ಸಂಪರ್ಕಿಸಿ:
1. ನಿಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿ.ಪಂ) ಕಛೇರಿಗೆ ಭೇಟಿ ನೀಡಿ.
2. ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾ.ವ) ಹೊಸುರು ಕ್ಷೇತ್ರ ಮತ್ತು ತರಬೇತಿ ಕೇಂದ್ರ.ಸಿದ್ದಾಪುರ ರವರಿಗೆ ಸಂಪರ್ಕಿಸಿ, ಕಛೇರಿ ದೂರವಾಣಿ ಸಂಖ್ಯೆ: 9611227478 / 8971956318
(ವಿ.ಸೂ; 18-30 ವರ್ಷದವರೆಗಿನ ಯಾರೂ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ( ಪ.ಜಾ./ಪ.ಪಂ ಅಭ್ಯರ್ಥಿಗಳಿಗೆ 33 ವರ್ಷಗಳತನಕ, ಮಾಜಿ ಸೈನಿಕರಿಗೆ 33-65 ವರ್ಷತನಕ ಸಡಿಲಿಕೆ)
Leave a Comment