ದಾಂಡೇಲಿ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಇವರ ಸಂಯುಕ್ತಾಶ್ರದಲ್ಲಿ ಗಣೇಶಗುಡಿಯಲ್ಲಿ ನಡೆಯುತ್ತಿರುವ ಈ ಕಾಳಿ ಕಯಾಕ ಉತ್ಸವ ಇದೀಗÀ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲೀ ಕಯಾಕ್ ಸ್ಪರ್ದೆಯಲ್ಲಿ ಭಾಗವಹಿಸಬಲ್ಲಂತಹ ಅನೇಕ ಪರಿಣಿತರಿದ್ದಾರೆ. ಜಲ ಸಾಹಸ ಕ್ರೀಡೆಯ ತಜ್ಞರಿದ್ದಾರೆ, ತರಬೇತುದಾರರಿದ್ದಾರೆ, ಪರಿಣಿತರಿದ್ದಾರೆ, ಪ್ರವಾಸೋದ್ಯಮಿಗಳಿದ್ದಾರೆ, ಜೋಯಿಡಾ, ದಾಂಡೇಲಿಯಲ್ಲಿ ಪ್ರವಾಸೋದ್ಯಮ ಸಂಘಟನೆಗಳಿವೆ. ಆದರೆ ಈ ಕಯಾಕ್ ಸ್ಪರ್ದೆಯ ಬಗ್ಗೆ ಇವರ್ಯಾರಿಗೂ ಈವರೆಗೂ ಸÀಮರ್ಪಕ ಮಾಹಿತಿಯೂ ಇಲ್ಲ. ಪೂರ್ವಭಾವಿ ಸಭೆಗಳಿಗೂ ಇವರಿಗೆ ಆಹ್ವಾನವಿಲ್ಲ. ಕೆಲವು ಸ್ಥಳೀಯ ಜಲ ಸಾಹಸ ಕ್ರೀಡಾ ಪರಿಣಿತರು ನಮಗೆ ಯಾರಿಂದಲೂ ಈ ಬಗ್ಗೆ ಕರೆಯೂ ಇಲ್ಲ. ಮಾಹಿತಿಯೂ ಇಲ್ಲ. ಕೇವಲ ಪತ್ರಿಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಷ್ಟೇ ಈ ಬಗ್ಗೆ ನೋಡಿದ್ದೇವೆ. ಇಲ್ಲಿ ಯಾರು ಭಾಗವಹಿಸಬೇಕೆಂಬುದರ ಬಗ್ಗೆಯೂ ಸಮರ್ಪಕ ವಿವರಣೆಯಲ್ಲ ಎಂಬ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಆಸಕ್ತರು ಎಲ್ಲಿ ನೊಂದಾಯಿಸಿಕೋಳ್ಳಬೇಕೆಂಬ ಮಾಹಿತಿಯಿಲ್ಲ. ಇದು ಸ್ಥಳೀಯರನ್ನು ಬಿಟ್ಟು ಕೇವಲ ಹೊರಗೊನವರಿಗೆ ಅದರಲ್ಲೂ ವಿದೇಶಿಗರಿಗೆ ಹೆಚ್ಚಿನ ಆದ್ಯತೆ ನೀಡಿ ನಡೆಸುತ್ತಿರುವ ಸ್ಪರ್ದೆಯೇ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಈಗ ಕಯಾಕ್ ಉತ್ಸವ ನಡೆಯಲಿರುವ ಕಾಳಿ ನದಿ ಪ್ರದೇಶ ಇದು ಹಾರ್ನಬಿಲ್ ಸಂರಕ್ಷಿತ ಪ್ರದೇಶವಾಗಿದೆ. ಆದರೆ ಈ ಕಯಾಕ್ ಪೇಸ್ಟಿಬಲ್ ನಡೆಸುವಾಗ ಸಂಘಟಕರು ಅರಣ್ಯ ಇಲಾಖೆಯ ಪರವಾನಿಗೆಯನ್ನೇ ಪಡೆದಿಲ್ಲವಂತೆ.
ಜಲ ಸಾಹಸ ಕ್ರೀಡೆಗಳನ್ನು ನಡೆಸುವಾಗ ಭಾಗವಹಿಸುವವ ರೆಸ್ಕ್ಯು (ಜೀವ ರಕ್ಷಣೆ) ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕೆಂದಿದೆ. ಸಂಘಟಕರು ಅವಶ್ಯ ವಿಮಾ ಮಾಡಿಸಿರಬೇಕು. ಅಂಬ್ಯಲೆನ್ಸ್ ವ್ಯವಸ್ಥೆಯಿರಬೇಕು. ವೈದ್ಯರಿರಬೇಕು, ಭದ್ರೆತೆಯಿರಬೇಕು. ಸಂಘಟಕರು ಈ ಯಾವುದರ ಬಗ್ಗೆಯೂ ಮಾಹಿತಿ ನೀಡಿಲ್ಲ.
* ಗಣೇಶಗುಡಿಯಲ್ಲಿ ನಡೆಯಲಿರುವ ಕಯಾಕ್ ಫೇಸ್ಟಿವಲ್ ಬಗ್ಗೆ ನನಗ್ಯಾವ ಮಾಹಿತಿಯೂ ಇಲ್ಲ. ಅದು ನಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶ. ಆದರೆ ನಮ್ಮಿಂದ ಯಾವ ಪರವಾನಿಗೆಯನ್ನೂ ಪಡೆದಿಲ್ಲ.
-ಡಾ. ರಮೇಶ, ಡಿ.ಎಪ್.ಓ, ಹಳಿಯಾಳ
* ಕಾಳಿ ನದಿಯಲ್ಲಿ ಕಯಾಕ್ ಉತ್ಸವ ನಡೆಯುತ್ತಿರುವುದು ಸ್ವಾಗತಾರ್ಹ. ಈ ಬಗ್ಗೆ ಮಾದ್ಯಮಗಳಿಂದ ತಿಳಿದಿದ್ದೇವೆ. ಆದರೆ ಈ ನಮ್ಮ ಪ್ರವಾಸೋದ್ಯಮ ಸಂಸ್ಥೆಗೆ ಸಮರ್ಪಕ ಮಾಹಿತಿಯಿಲ್ಲ. ಸ್ಥಳೀಯರನ್ನು ಕಡೆಗಣಿಸಿದ್ದು ಬೇಸರ.
– ಮೋಹನ ಹಲವಾಯಿ, ಕಾರ್ಯದರ್ಶಿ,
ದಾಂಡೇಲಿ ಪ್ರವಾಸೋದ್ಯಮ ಸಂಸ್ಥೆ.
* ಗಣೇಶಗುಡಿಯಲ್ಲಿ ರಾಷ್ಟ್ರ ಮಟ್ಟದ ಕಯಾಕ ಉತ್ಸವ ನಡೆಯುತ್ತಿರುವ ಬಗ್ಗೆ ಮಾದ್ಯಮಗಳಿಂದ ತಿಳೀದಿದ್ಧೇವೆ. ಆದರೆ ಸ್ಥಳೀಯ ಪ್ರವಾಸೋದ್ಯಮ ಸಂಸ್ಥೆಯಾದ ನಮಗೆ ಮಾಹಿತಿಯೂ ಇಲ್ಲ. ಪೂರ್ವ ಭಾವಿ ಸಭೆಯನ್ನೂ ನಡೆಸಿಲ್ಲ. ಇದು ಸರಕಾರದ ಹಣ ಫೋಲು ಮಾಡುವ ಕಾರ್ಯಕ್ರಮ ಆಗದಿರಲಿ. ಸ್ಥಳೀಯರನ್ನು ಕಡೆಗಣಿಸಿದ್ದು ಸರಿಯಲ್ಲ.
– ಸುನೀಲ ದೇಸಾಯಿ,
ಅಧ್ಯಕ್ಷರು, ಕಾಳಿ ಪ್ರವಾಸೋದ್ಯಮ ಸಂಸ್ಥೆ ಜೋಯಿಡಾ.
Leave a Comment