ಹೊನ್ನಾವರ : ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದೇ ತಡ ಕಂದಾಯ, ಗಣಿ ಮತ್ತು ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ 12 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮಳೆಗಾಲದ ಕಾರಣಕ್ಕೆ ಸ್ಥಗಿತವಾಗಿದ್ದ ಮರಳುಗಾರಿಕೆಗೆ ಇದುವರೆಗೂ ಜಿಲ್ಲಾಡಳಿತ ಹಸಿರು ನಿಶಾನೆ ನೀಡಿರಲಿಲ್ಲವಾದರೂ ಜಿಲ್ಲೆಯಲ್ಲಿ ಮರಳು ತೆಗೆಯುವುದು ಮತ್ತು ಸಾಗಿಸುವ ಪ್ರಕ್ರಿಯೆ ನಿರಂತರ … [Read more...] about ಶರಾವತಿ ನದಿಯಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಆರೋಪದೊಂದಿಗೆ 12 ದೋಣಿಗಳು ವಶ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಸಮರ್ಪಕತೆಯ ತಾಣವಾಗಿ ಮಾರ್ಪಟ್ಟಿದೆ ಹೊನ್ನಾವರ ಇಕೋ ಪಾರ್ಕ ಆವರಣ
ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಪಾರ್ಕ ಪ್ರವಾಸಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಇಲ್ಲಿ ನಿರ್ವಹಣೆ ಮಾಡಬೇಕಾದವರ ಅಸರ್ಮಪಕ ನಿರ್ವಹಣೆಯಿಂದ ಪಾರ್ಕ ಸೊಬಗು ಕುಂದುತ್ತಿದೆ.ಬ್ಯ್ಲೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಸನಿಹದಲ್ಲೆ ಇರುವ ಇಕೋ ಪಾರ್ಕನ ಸೌಂದರ್ಯ ವಿಕ್ಷಿಸಲು ದೇಶದ ವಿವಿದಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ … [Read more...] about ಅಸಮರ್ಪಕತೆಯ ತಾಣವಾಗಿ ಮಾರ್ಪಟ್ಟಿದೆ ಹೊನ್ನಾವರ ಇಕೋ ಪಾರ್ಕ ಆವರಣ
ಕೊರೋನಾದಿಂದಾಗಿ ಬಾಗಿಲು ಮುಚ್ಚಿದ್ದ ತಾಲ್ಲೂಕಿನ 325 ಅಂಗನವಾಡಿ ಕೇಂದ್ರಗಳು ಕಾರ್ಯಾರಂಭ
ಹೊನ್ನಾವರ ; ಕೊರೋನಾ ಸಂಕಷ್ಟದಿಂದ ಬಾಗಿಲು ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಸೋಮವಾರದಿಂದ ಆರಂಭಗೊಂಡಿದೆ. ತಾಲೂಕಿನ 325 ಅಂಗನವಾಡಿಗಳು ಆರಂಭವಾಗಿದ್ದು, ಪಾಲಕರೊಡನೆ ಕೇಂದ್ರಕ್ಕೆ ಆಗಮಿಸುವ ದೃಶ್ಯ ಕಂಡು ಬಂದಿದೆ.ಕೊರೋನಾ ಭೀತಿಯ ನಡುವೆಯೂ ರಾಜ್ಯಾದ್ಯಂತ ಹಂತಹಂತವಾಗಿ 1 ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗಿತ್ತು. ಆ ಬಳಿಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರ್ಧ ದಿನ … [Read more...] about ಕೊರೋನಾದಿಂದಾಗಿ ಬಾಗಿಲು ಮುಚ್ಚಿದ್ದ ತಾಲ್ಲೂಕಿನ 325 ಅಂಗನವಾಡಿ ಕೇಂದ್ರಗಳು ಕಾರ್ಯಾರಂಭ
ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರಿಂದ ಮುತ್ತಿಗೆ
ಹೊನ್ನಾವರ: ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿಷಯದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳೂ ಒಂದಿಲ್ಲೊಂಡು ಎಡವಟ್ಟು ಮಾಡುತ್ತಿದ್ದು, ಇದರ ವಿರುದ್ದ ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರು ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಟೊಂಕಾ ಭಾಗದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವಿಷಯ ಹೈಕೋರ್ಟ ಅಂಗಲದಲ್ಲಿದ್ದು, ಇದೀಗ ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಟೊಂಕಾ ಭಾಗದದಲ್ಲಿ ಸ್ವಚ್ಚ ಮಾಡುವಂತೆ ಬಂದರು ಇಲಾಖೆ ಹಾಗೂ ಖಾಸಗಿ ವಾಣಿಜ್ಯ ಬಂದರು … [Read more...] about ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರಿಂದ ಮುತ್ತಿಗೆ
ಕೋವಿಡ್ ನೆಪವೊಡ್ಡಿ ಪ್ರದರ್ಶನಕ್ಕೆ ಅವಕಾಶ ನೀಡದೇ ಇರುವುದು ಖಂಡನಾರ್ಹ ;ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ
ಹೊನ್ನಾವರ; ಸರ್ಕಾರಗಳು ಯಕ್ಷಗಾನ ನಾಟಕ, ಸಂಗೀತದಂತಹ ಕಾರ್ಯಕ್ರಮ ನಡೆಸಲು ಕೋವಿಡ್ ನೆಪವೊಡ್ಡಿ ಪ್ರದರ್ಶನಕ್ಕೆ ಅವಕಾಶ ನೀಡದೇ ಇರುವುದು ಖಂಡನಾರ್ಹ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.ಅವರು ಹೊನ್ನಾವರದಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ ಕಳೆದ ಎರಡು ವರ್ಷದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋವಿಡ್ ನೆಪವೊಡ್ಡಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಕಲಾವಿದರು ಕಲೆಯನ್ನು ನಂಬಿ ಬದುಕುತ್ತಿದ್ದಾರೆ. … [Read more...] about ಕೋವಿಡ್ ನೆಪವೊಡ್ಡಿ ಪ್ರದರ್ಶನಕ್ಕೆ ಅವಕಾಶ ನೀಡದೇ ಇರುವುದು ಖಂಡನಾರ್ಹ ;ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ



