ಕಾರವಾರ:ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೋಲೀಸ್ ಠಾಣೆಯ ಅಧಿಕಾರಿಗಳು ಮೇ 23 ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯ ವರೆಗೆ ಅಂಕೋಲಾ ಪ್ರವಾಸ ಮಂದಿರದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಮಟಾ ಪ್ರವಾಸಿ ಮಂದಿರದಲ್ಲಿ ಹಾಗೂ ಮೇ 24 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೊನ್ನಾವರ ಪ್ರವಾಸಿ ಮಂದಿರ ಮತ್ತು ಮ. 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಟ್ಕಳ ಪ್ರವಾಸಿ ಮಂದಿರದಲ್ಲಿ … [Read more...] about ಮೇ 23 ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯ ವರೆಗೆ ಅಂಕೋಲಾ ಪ್ರವಾಸ ಮಂದಿರದಲ್ಲಿ ಅಹವಾಲು ಸ್ವೀಕಾರ
ಅಂಕೋಲಾ
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಕಾರವಾರ:ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ … [Read more...] about ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
ಭಟ್ಕಳ:ಸಂಗಾತಿ ರಂಗಭೂಮಿ(ರಿ.) ಅಂಕೋಲಾ ಹಾಗೂ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಎಂ. ಆರ್. ನಾಯ್ಕ ಮಾತನಾಡಿ ಮಕ್ಕಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ … [Read more...] about ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಅಂಕೋಲಾ : ಅಂಕೋಲಾ ತಾಲೂಕಿನ ಕೇಣಿ ವಿವೇಕಾನಂದ ಮೈದಾನದಲ್ಲಿ ಏ. 26 ರಿಂದ ಮೇ.1 ರವರೆಗೆ ನಡೆಯಲಿರುವ ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಅಂಜಲಿ ಐಗಳ ಮಾತನಾಡಿ ಐದು ದಿನಗಳ ಈ ಹಬ್ಬ ನಡೆಯಲಿದ್ದು ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಕಲಾ ತಂಡಗಳು ಇಲ್ಲಿ ಬಾಗವಹಿಸಲಿದ್ದು ಸ್ಥಳೀಯ ಕಲಾತಂಡಗಳಿಗು ಇಲ್ಲಿ ಅವಕಾಶ ಕಲ್ಪಿಸಿಕೋಡಲಾಗಿದೆ ಎಂದು … [Read more...] about ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಹಂದಿಗೋಣ ಈರುಳ್ಳಿ ಖಾರ ಸಿಹಿ ಮಿಂಚುಳ್ಳಿ
ರಾಜ್ಯದ ಕರಾವಳಿಯ ಜೀವನಾಡಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಈ ತಿಂಗಳು ನೀವೇನಾದರೂ ಸಂಚರಿಸುತ್ತಿದ್ದರೆ ಕುಮಟಾ ಬರುತ್ತಿದ್ದಂತೆ 'ಹಂದಿಗೋಣ ಈರುಳ್ಳಿ' ನಿಮ್ಮನ್ನು ಸೆಳೆಯುತ್ತದೆ.ಹೆದ್ದಾರಿಗುಂಟ ಅಲ್ಲಲ್ಲಿ ರಾಶಿ ಹಾಕಿಟ್ಟ ಗುಲಾಬಿ ಬಣ್ಣದ ಈರುಳ್ಳಿಯ ಬೆಡಗು ಅಲ್ಲಿ ಓಡಾಡುವ ಬೈಕು, ಕಾರು, ಲಾರಿಗಳ ಓಟಕ್ಕೆ ತಡೆಯೊಡ್ಡುತ್ತದೆ. ಹೆದ್ದಾರಿಯಂಚಿನಲ್ಲಿ ಮಾರಿಗೊಂದರಂತೆ ಅಚ್ಚುಕಟ್ಟಾಗಿ ಪೇರಿಸಿಟ್ಟ ಈರುಳ್ಳಿ ತಡಿಯನ್ನು ನೋಡುವುದೇ ಸೊಗಸು. ಕರಾವಳಿಯ … [Read more...] about ಹಂದಿಗೋಣ ಈರುಳ್ಳಿ ಖಾರ ಸಿಹಿ ಮಿಂಚುಳ್ಳಿ