ಕಾರವಾರ:ನಗರದ ಕನ್ನಡ ಭವನದಲ್ಲಿ ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ಭಾರತ್ ಆರ್.ಟಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಜೆ. ಅಂಬಿಗ ತಿಳಿಸಿದ್ದಾರೆ. ಸಭೆಗೆ ರಾಜ್ಯಾಧ್ಯಕ್ಷ ಜೈಶಂಕರ ರೆಡ್ಡಿ, ಕಾರ್ಯಾಧ್ಯಕ್ಷ ಕೆ.ಪಿ.ಮಂದಾಲೆ, ಕೊಟರೆ ಗೌಡ ಮೊದಲಾದ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈ ಸಭೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ ಗೋವಾ ರಾಜ್ಯದ ಎಲ್ಲ ಇ.ಪಿ.ಎಫ್ ಪಿಂಚಣಿದಾರರು ಹಾಗೂ … [Read more...] about ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆ
ಕಾರವಾರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ
ಕಾರವಾರ:ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಪೈಕಿ ಈಗಾಗಲೇ ತಿರಸ್ಕರಿಸಲಾಗಿರುವ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮ ಅರಣ್ಯ ಹಕ್ಕು ಸಮಿತಿ ಮಟ್ಟದಲ್ಲಿ ಹೊರತುಪಡಿಸಿ ಉಪವಿಭಾಗಾಧಿಕಾರಿ ಮಟ್ಟದಲ್ಲಿ ವಿವಿಧ … [Read more...] about ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಪತ್ರ ನೀಡಿಕೆ ಪ್ರಗತಿ ಪರಿಶೀಲನೆ
ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಕಾರವಾರ:ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ ನಡೆಯಲಿದೆ ಎಂದು ಬೆಂಗಳೂರಿನ ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದ ರಿದಂ ಹಾರ್ಟ್ ಬೀಟ್ ನೃತ್ಯ ಶಾಲೆ ಹಾಗೂ ತಾಂಡವ ಕಲಾ ನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ಸ್ಥಳೀಯ ಕಲಾವಿದರಲ್ಲದೇ ಕನ್ನಡ ಚಿತ್ರರಂಗದ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ … [Read more...] about ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ
ಕಾರವಾರ:ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಮೇ 10ರಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಬೆಳಿಗ್ಗೆ 10ಗಂಟೆಗೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ … [Read more...] about ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ
ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮ
ಕಾರವಾರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ 'ಜನಮನ' ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಾದ … [Read more...] about ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮ
