ಕಾರವಾರ: ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ ಎಂದು ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಹೇಳಿದರು. ಸದಾಶಿವಗಡದಲ್ಲಿ ನಡೆದ ಕನ್ನಡ-ಕೊಂಕಣಿ ಮಾತೆ ಭಾವಚಿತ್ರ ನಮನ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃಭಾಷೆಯನ್ನು ಬೆಳೆಸಿ, ರಕ್ಷಿಸುವದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಉದ್ಯಮಿ ಜಾರ್ಜ ಫರ್ನಾಂಡಿಸ್, ಬಿಜೆಪಿ ಮುಖಂಡೆ ರೂಪಾಲಿ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಿಕಟಪೂರ್ವ ಕಸಾಪ ಅಧ್ಯಕ್ಷ ರಾಮಾ … [Read more...] about ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ;ಭವೇಶಾನಂದ ಸ್ವಾಮೀಜಿ
ನಡೆದ
ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ
ಕಾರವಾರ: ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಹೆಸ್ಕಾಂ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿಲ್ಲ. ಬೆಳಗ್ಗೆ ಹೋದ ಕರೆಂಟ್ ರಾತ್ರಿ ಕಳೆದರೂ ಬರಲ್ಲ... ಇವೇ ಮೊದಲಾದ ದೂರುಗಳಿಂದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸದಿದ್ದರೂ ದೂರುಗಳಿಗೆ ಬರವಿರಲಿಲ್ಲ. ಸಮಸ್ಯೆಗಳನ್ನು ಆಲಿಸಿದ ಹೆಸ್ಕಾಂ … [Read more...] about ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ
ಬಿಜೆಪಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ
ಕುಮಟಾ:ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಮ್ಮೆಯಷ್ಟೆ ಕರ್ನಾಟಕ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರಿಂದ ಹೆದರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಪಕ್ಷದ ನಾಯಕ ಯಡಿಯೂಪ್ಪನವರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧಿ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು. ರವಿವಾರದಂದು ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ನಡೆದ ಪಕ್ಷ ಸೇರ್ಪಡೆ … [Read more...] about ಬಿಜೆಪಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ
ಸಾಯಿ ಮಂದಿರದಲ್ಲಿ ನಡೆದ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ
ಕಾರವಾರ:ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಕಳೆದ 15 ವರ್ಷಗಳಿಂದ ತಾಳಮದ್ದಳೆಯ ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿಯರು ನಗರದ ದೋಭಿಘಾಟ ರಸ್ತೆಯ ಸಾಯಿಮಂದಿರದಲ್ಲಿ "ರುಕ್ಮಾಂಗದ ಚರಿತ್ರೆ" ಎಂಬ ತಾಳಮದ್ದಳೆ ನಡೆಸಿದರು. ರುಕ್ಮಾಂಗದನಾಗಿ ಮಲ್ಪೆ ವಾಸುದೇವ ಸಾಮಗ, ಧರ್ಮಾಂಗದನಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ಮೋಹಿನಿಯಾಗಿ ಎಂ.ಕೆ.ರಮೇಶ ಆಚಾರ್ಯ, ಸಂಧ್ಯಾವಳಿಯಾಗಿ ರಘುನಾಥ ಶೆಟ್ಟಿ ಪಾತ್ರ ನಿಭಾಯಿಸಿದರು. ಹಿಮ್ಮೇಳದಲ್ಲಿ ಭಾಗವತರಾರಗಿ ಕರುಣಾಕರ ಶೆಟ್ಟಿ ಹಾಗೂ … [Read more...] about ಸಾಯಿ ಮಂದಿರದಲ್ಲಿ ನಡೆದ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ
ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ವಕೀಲರ ಸಂಘದ ವತಿಯಿಂದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಾವದೇ ಆಸೆ ಆಮೀಷಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ವಕೀಲರ … [Read more...] about ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ