ಕಾರವಾರ: ನಗರದ ಹೈ ಚರ್ಚ ರಸ್ತೆಯಲ್ಲಿ ನೂತನವಾಗಿ ಸಂಗೀತ ತರಗತಿಯನ್ನು ಆರಂಭಿಸಲಾಗಿದೆ. ಸೋಮವಾರ ಸಂಜೆ ಗಾಯಕಿ ಲತಾ ಹೆಗಡೆ ಸಂಗೀತ ತರಗತಿಯನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಶಾರದಾ ಪೂಜೆ ನಡೆಯಿತು. ನಂತರ ಲತಾ ಹೆಗಡೆ ತಂಡದವರಿಂದ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ಗಾಯಕರಾದ ಗೌರಿಶ್ ಯಾಜಿ, ತಬಾಲಾ ವಾದಕ ಭಾರ್ಗವ ಹೆಗಡೆ ಭಾಗವಹಿಸಿದ್ದರು. ಪ್ರಮುಖರಾದ ಶ್ಯಾಮಲಾ ಭಟ್ಟ, ಪಿ.ಎಸ್. ಭಟ್ಟ, ಮಾರುತಿ ಕಮಾತ್, ಅಶೋಕ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು. … [Read more...] about ನೂತನವಾಗಿ ಸಂಗೀತ ತರಗತಿ ಆರಂಭ