ಹೊನ್ನಾವರ;ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ನಾಗಜಟಕೇಶ್ವರ ಎಂಬ ಟ್ರೋಲರ್ ಬೋಟ್ ಸಮುದ್ರದ ಮಧ್ಯೆ ಮುಳುಗಿದೆ.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಯಂತ್ರ ಸ್ಥಗಿತಗೊಂಡು ಕಡಲ ಅಲೆಯ ಹೊಡೆತಕ್ಕೆ ಬೋಟ್ ಮುಳುಗಿರುವದಾಗಿ ಹೇಳಲಾಗಿದೆ. ಬೋಟ್ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಇನ್ನಿತರ ಬೋಟ್ನಲ್ಲಿದ್ದ ಮೀನುಗಾರರ ನೆರವಿನಿಂದ ರಕ್ಷಿಸಲಾಗಿದೆ. ಈ ಅವಘಡದಿಂದ ಮೀನುಗಾರಿಕೆ ಬಲೆ ಬೋಟ್ ಹಾನಿ ಸೇರಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ … [Read more...] about ಬೋಟ್ ಮುಳುಗಡೆ