ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮದ ಆರೋಳ್ಳಿ ಮೂಲದ ಸಂಜಯ ಸುರೇಶ ಕಾಮತ್ ಇವರು ನ್ಯಾಯವಾದಿಗಳಾಗಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ರಾಜ್ಯ ನೋಟರಿಯಾಗಿ ಆಯ್ಕೆಯಾಗಿರುತ್ತಾರೆ. ಇವರು ಸಾಮಾಜಿಕವಾಗಿ ಹೊನ್ನಾವರದ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. … [Read more...] about ರಾಜ್ಯ ನೋಟರಿಯಾಗಿ ಆಯ್ಕೆ
ಮೂಲ
ಭಿನ್ನಮತ ಬಹಿರಂಗ:- ಮೂಲ ಜೆಡಿಎಸ್ ಮುಖಂಡರ ಗೈರು
ಹಳಿಯಾಳ: ಗುರುವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಯಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದ ಮೂಲ ಜೆಡಿಎಸ್ ಮುಖಂಡರು, ತಾಲೂಕಾ ಕಮೀಟಿಯ ಪ್ರಮುಖರು ಹಾಗೂ ಹಿರಿಯ ಮುಖಂಡರ ಅನುಪಸ್ಥಿತಿ ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದೆ. ಅಭ್ಯರ್ಥಿ ಕೆ.ಆರ್.ರಮೇಶ ಅವರ ತುಘಲಕ್ ದರ್ಬಾರನಿಂದ ಬೆಸತ್ತಿದ್ದು ಪಕ್ಷದ ಮೂಲ ಮುಖಂಡರಿಗೆ ಮರ್ಯಾದೆ ನೀಡದೆ ಏಕಾಧಿಪತ್ಯ ನಡೆಸುತ್ತಿರುವ ಬಗ್ಗೆ ಕಳೆದ 2 ದಿನಗಳ ಹಿಂದೆಯಷ್ಠೆ … [Read more...] about ಭಿನ್ನಮತ ಬಹಿರಂಗ:- ಮೂಲ ಜೆಡಿಎಸ್ ಮುಖಂಡರ ಗೈರು
ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ
ಹೊನ್ನಾವರ: ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ನ್ಯಾಯಾಲಯದಲ್ಲಿ ಧ್ವಜಾರೋಹಣ ನಡೆಸಿ ವಕೀಲರ ಸಂಘ ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕೆ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಮೌಲ್ಯಗಳು ಸಂವಿಧಾನದಲ್ಲಿ ಅನಾವರಣಗೊಂಡಿವೆ. ಅವುಗಳ ಪಾಲನೆಯೇ ನಾವು … [Read more...] about ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ
ಪಾದಚಾರಿ ಮಹಿಳೆಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಹೊನ್ನಾವರ:ಭಟ್ಕಳ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ತಾಲೂಕಿನ ಮಾಳಕೋಡದ ಕೆಳಗಿನ ಇಡಗುಂಜಿ ನಿವಾಸಿ ಸುಮಲತಾ ಮಾಬ್ಲೇಶ್ವರ ಭಟ್ಟ (46) ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ತಮ್ಮ ಕೆಲಸ ಕಾರ್ಯದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ರಾಷ್ತ್ರೀಯ ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವಾಗ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಅವಘಡ ಸಂಭವಿಸಿದೆ … [Read more...] about ಪಾದಚಾರಿ ಮಹಿಳೆಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ಹೊನ್ನಾವರ;ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಿತು. ನಮ್ಮ ಮಹಾವಿದ್ಯಾಲಯದ ಬ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬ.ಎ. ಎಂ.ಕಾಂ., ಹಾಗೂ ಎಂ.ಎಸ್ಸಿ. ಅಂತಿಮ ವರ್ಷದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಂಪನಿಯ ಎಚ್.ಆರ್. ವಿಭಾಗದ ಪ್ರಥಮೇಶ ರೇಡಕರ್, ಜಿ.ಡಿ. ವಿಡಿಯೋ ಸಂವಾದಗಳ ಮುಂತಾದ 4 … [Read more...] about ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ