ಹೊನ್ನಾವರ:
ಹೊನ್ನಾವರ ಗೇರಸೊಪ್ಪಾ ತುಮಕೂರು ರಾಜ್ಯ ಹೆದ್ದಾರಿ ಕಳೆದ 10-15 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ಅಂತ ಪರಿವರ್ತನೆಗೊಂಡಿದೆ. ಆದರೆ ಈ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಇಂದಿಗೂ ಗ್ರಾಮಾಂತರ ರಸ್ತೆಗಿಂತಲೂ ಕನಿಷ್ಟವಾಗಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಹತ್ತಾರು ಬಸ್ಸುಗಳು ರಾಜ್ಯದ ರಾಜಧಾನಿ ಬೆಂಗಳೂರಿಗೆ ಓಡಾಡುತ್ತಲಿರುತ್ತದೆ. ಹಾಗೇ ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗಾ, ಸಾಗರ ಮುಂತಾದ ನಗರಗಳಿಗೆ ಬಸ್ಸುಗಳು ಪ್ರತಿನಿತ್ಯ ಓಡಾಡುತ್ತಲಿವೆ. ಸಾಕಷ್ಟು ಖಾಸಗಿ ವಾಹನಗಳು ಸಹ ಈ ಹೆದ್ದಾರಿಯಲ್ಲಿ ಓಡಾಡುತ್ತವೆ. ಆದರೆ ಎರಡು ವಾಹನಗಳು ಮುಖಾಮುಖಿಯಾಗಿ (ಎದುರು ಬದುರಾಗಿ) ಓಡಾಡುವ ಕನಿಷ್ಟ ವ್ಯವಸ್ಥೆಯನ್ನು ಇಲಾಖೆ ಕೈಗೊಳ್ಳದೇ ಹಲವು ವರ್ಷಗಳಿಂದ ನಿದ್ರಿಸುತ್ತಲಿದೆ. ದಿನದಿಂದ ದಿನಕ್ಕೆ ವಾಹನಗಳ ಓಡಾಟ ಈ ಹೆದ್ದಾರಿಯಲ್ಲಿ ಹೆಚ್ಚುತ್ತಲಿರುವುದರಿಂದ ವಾಹನ ಚಾಲಕರು ವೈಮನಗಳನ್ನು ಕಣ್ಣಾಗಿಸಿಕೊಂಡು ವಾಹನ ಚಾಲನೆ ಮಾಡಬೇಕಾದ ಸಂದರ್ಭಗಳಿವೆ. ಪ್ರಮಾಣಿಕರು ಸದಾ ಜಾಗ್ರತರಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾಗಿದೆ. ಯಾಕೆಂದರೆ ಹೊನ್ನಾವರ ತಾಲೂಕಿನ ಉಪ್ಪೋಣಿಯಿಂದ ಸಿದ್ಧಾಪುರ ತಾಲೂಕ ಮಾವಿನ ಗುಂಡಿಯ ತನಕ ಅತ್ಯಂತ ಅಪಾಯಕಾರಿ ಪ್ರದೇಶವಾಗಿದೆ. ವಾಹನ ಚಾಲಕರು ಸ್ವಲ್ಪವೇ ಎಚ್ಚರ ತಪ್ಪಿದರೂ ಅನಾಹುತ ಖಂಡಿತ. ಸರ್ಕಾರದ ಯೋಜನೆಯಲ್ಲಿ ಎಂದೋ ಆಗುವ ಬಹುಮುಖ ರಸ್ತೆಯ ಕನಸು ಕಾಣುವುದರೊಂದಿಗೆ, ಇಂದು ಈ ಹೆದ್ದಾರಿಯಲ್ಲಿ ಎರಡು ಭಾರಿ ವಾಹನಗಳು ಮುಖಾಮುಖಿಯಾಗಿ ಸರಳವಾಗಿ ಓಡಾಡುವ ವ್ಯವಸ್ಥೆಯನ್ನು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಲ್ಪಿಸದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ. ನಿತ್ಯ ನಡೆಯುವ ಅವಗಡಗಳಿಗೆ ಯಾರು ಹೊಣೆಗಾರರು, ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇನ್ನಾದರೂ ಎಚ್ಚೆತ್ತು ತಮ್ಮ ಕಾರ್ಯ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಕನಿಷ್ಟ ಎರಡು ಬಸ್ಸುಗಳು ಓಡಾಡುವಷ್ಟು ರಸ್ತೆಯನ್ನು ಸುಸಜ್ಜಿತಗೊಳಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಗೋವಿಂದ ನಾಯ್ಕ ಗೇರಸೊಪ್ಪ, ಗ್ರಾಮ ಪಂಚಾಯತ ಸದಸ್ಯ ಎಂ.ಜಿ ನಾಯ್ಕ ಉಪ್ಪೋಣಿ, ಮಂಜುನಾಥ ಹಳ್ಳೇರ ಹಾಡಗೇರಿ, ದೇವೆಂದ್ರ ನಾಯ್ಕ ಹುಂಜನಮಕ್ಕಿ ತಿಳಿಸಿದ್ದಾರೆ.
ಅನಂತ ನಾಯ್ಕ ಹೆಗ್ಗಾರ
ಅಧ್ಯಕ್ಷರು,
9481132547, 9632420853
Leave a Comment