ಹೊನ್ನಾವರ:
ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ವಹಿವಾಟನ್ನು ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿ ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ನೂತನ ಮೀನುಮಾರುಕಟ್ಟೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ನಂತರ ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ವಿ.ಆರ್.ಗೌಡ, ಪಿಎಸ್ಐ ಆನಂದಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಬೇಟಿ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಯತ್ನಿಸಿದರು. ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.
À.ಪಂ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸಿ `ಕೆಲ ಮೀನುಗಾರರು ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ ನಿಯಮಾಳಿಗಳನ್ನು ಗಾಳಿಗೆ ತೂರಿ ಬಂದರು ಇಲಾಖೆಯ ಖಾಲಿ ಜಾಗದಲ್ಲಿ ಕುಳಿತು ಯಾವುದೇ ತೆರಿಗೆ ಪಾವತಿಸದೇ ಮೀನು ವ್ಯಾಪಾರ ಆರಂಭಿಸಿದ್ದಾರೆ. ವಾಹನಗಳಲ್ಲಿ ಮೀನು ತುಂಬುವ ಹಾಗೂ ಖಾಲಿ ಮಾಡುವ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರು ಹೊಸದಾಗಿ ನಿರ್ಮಿಸಿರುವ ಮೀನು ಮಾರುಕಟ್ಟೆಯಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬೇಕು. ಪಟ್ಟಣ ಪಂಚಾಯಿತಿಯು ಮೀನು ಮಾರಾಟ ಮಾಡುವ ಉದ್ದೇಶದಿಂದ ಸುಸಜ್ಜಿತ ಮೀನುಮಾರುಕಟ್ಟೆಯನ್ನು ವ್ಯಾಪಾರಸ್ಥರಿಗಗಿ ಸಿದ್ದಧಪಡಿಸಿದೆ. ಈಗಾಗಲೇ ಹಲವು ನಾವು ಪ್ರತಿದಿನಕ್ಕೆ 20 ರೂ. ಗಳಂತೆ ಸುಂಕ ಕಟ್ಟಿ ವ್ಯಾಪಾರ ನಡೆಸುತ್ತಾ ಬಂದಿದ್ದೇವೆ. ಆದರೆ ಹಲವರು ಬಂದರು ಇಲಾಖೆಯ ಖುಲ್ಲಾ ಜಾಗದಲ್ಲಿ ಅಲ್ಲಲ್ಲಿ ಕುಳಿತು ಯಾವುದೇ ತೆರಿಗೆ ಪಾವತಿಸದೇ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಂಘವು ಟೇಂಡರ್ ರೂಪದಲ್ಲಿ ಕಚೇರಿಗೆ ಸಲ್ಲಿಸಬೇಕಾದ ಹಣವನ್ನು ಪಾವತಿಸಲು ಅಸಾಧ್ಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಮೀನು ಸಾಗಿಸುವ ವಾಹನಗಳ ಮೂಲಕ ಬಂದರು ಇಲಾಖೆಯ ಜಾಗದಲ್ಲಿಯೇ ಮೀನು ತುಂಬುವ ಹಾಗೂ ಖಾಲಿ ಮಾಡುವ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಪ್ರತಿದಿನ ತೆರಿಗೆ ಕಟ್ಟಿ ವ್ಯಾಪಾರ ನಡೆಸುವ ನಮಗೆ ಖರೀದಿಗೆ ಅವಕಾಶವಿಲ್ಲದಂತಾಗಿದೆ. ಸರ್ಕಾರದ ಅನುಮೋದನೆ ಪಡೆದು ಸಂಘವನ್ನು ರಚಿಸಲಾಗಿದ್ದು, ಮೀನು ಮಾರುಕಟ್ಟೆಯ ನಿರ್ವಹಣಾ ಟೇಂಡರ್ ಅವಧಿಯು ಮಾರ್ಚ್ ತಿಂಗಳಲ್ಲಿ ಕೊನೆಗೊಂಡಿದೆ. ಮೀನು ಮಾರುಕಟ್ಟೆಯಲ್ಲಿ ಎರಡು ಗುಂಪುಗಳಾಗಿದ್ದು, ಆ ಎರಡು ಗುಂಪುಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸೂರಿನಡಿಯಲ್ಲಿ ಮೀನು ವ್ಯಾಪಾರ ಮಾಡಲು ಪ.ಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಯು ಮುಂದಾಗಬೇಕಿದೆ. ಈಗಿರುವ ಟೇಂಡರ್ನ್ನು ಸಂಘಕ್ಕೆ ಮುಂದುವರಿಸಬೇಕಾಗಿದ್ದು, ಮುಂದಿನ ವರ್ಷದ ಟೇಂಡರ್ನ್ನು ಸಂಘಕ್ಕೆ ಮುಂದುವರಿಸಲು ಪ.ಪಂ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಲದೇವತಾ ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಕಮಲಾ ಮೇಸ್ತ, ಉಪಾಧ್ಯಕ್ಷೆ ಸುಶೀಲಾ ಮೇಸ್ತ, ಗಂಗಾ ಮೇಸ್ತ, ತಾರಾ ಆಚಾರಿ, ಲಲಿತಾ ಖಾರ್ವಿ, ಕಮಲಾ ದಾಮೋದರ ಮೇಸ್ತ, ಪಾರ್ವತಿ ಮೇಸ್ತ, ಶಾರದಾ ಮೇಸ್ತ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Leave a Comment