ಹೊನ್ನಾವರ;
ಕಾನೂನು ಬಾಹಿರವಾಗಿ ಲಾಟರಿ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಸಂಭವಿಸಿದೆ.
ಹೊದ್ಕೆಶಿರೂರಿನ ಶ್ರೀನಿವಾಸ ಶಂಕರ ಮಡಿವಾಳ (35) ದೈವಜ್ಞಕೇರಿಯ ನಾಗರಾಜ ಮಾದೇವ ದೇಶಭಂಡಾರಿ (30) ಕೆಕ್ಕಾರ ನಡುಕೇರಿಯ ನಾಗೇಶ್ ರಾಮದಾಸ ನಾಯ್ಕ (38) ಕೆಕ್ಕಾರ 1 ನೇ ಕ್ರಾಸ್ನ ಮಂಜುನಾಥ ಶ್ರೀಧರ ದೇಶಭಂಡಾರಿ(25) ಹಿರೇಬೈಲ್ ಜನಕಡ್ಕಲ್ದ ತಿಮ್ಮಪ್ಪಾ ದೇವಪ್ಪ ನಾಯ್ಕ (52) ಬಂಧಿತ ಆರೋಪಿಗಳು. ಬಂಧಿತರಿಂದ ಬಹುಮಾನಕ್ಕಿಟ್ಟ 15 ಲಕ್ಷ ರೂ, ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಐವರು ಆರೋಪಿಗಳು `ಜನಶ್ರೀ ಗ್ರೂಪ್ಸ್’ ಕಂಪನಿಯ ಸದಸ್ಯರಾಗಿದ್ದು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ 12 ವಾರಗಳ ಸುಲಭ ಕಂತುಗಳ ಬಹುಮಾನ ಯೋಜನೆ (ಸ್ಕೀಂ) ಮೂಲಕ ಲಾಟರಿ ನಡೆಸುತ್ತಿದ್ದ ಎನ್ನಲಾಗಿದೆ.
ಅಕ್ರಮ ದಂಧೆಯಲ್ಲಿ ಭಾಗಿಯಾದ ಐವರು ಆರೋಪಿಗಳ ಮೇಲೆ 1998ರ ಲೋಟರಿಸ್ ರೆಗ್ಯುಲೇಷನ್ಸ್ ಆಕ್ಟ ಮತ್ತು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಾವರ ಎಎಸ್ಐ ಸಾವಿತ್ರಿ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
Leave a Comment