ಕಾರವಾರ:
ಕಾರವಾರದ ಹಳೆ ಮೀನು ಮಾರುಕಟ್ಟೆ ಸುತ್ತಮುತ್ತಲಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಆ ಕಾರಣ ಅಲ್ಲಿದ್ದ ಕಟ್ಟಡವನ್ನು ಕೆಡವಲು ಬಂದ ನಗರಸಭೆಯ ಅಧಿಕಾರಿಗಳು ಮತ್ತು ಅಲ್ಲಿನ ವ್ಯಾಪಾರಸ್ಥತರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾರವಾರ ನಗರದ ಮಧ್ಯಭಾಗದಲ್ಲಿರುವ ಗಾಂಧಿ ಮಾರುಕಟ್ಟೆಗೆ ಹೊಂದಿಕೊಂಡಿರುವ ನಗರಸಭೆಗೆ ಸೇರಿದ ಕಟ್ಟಡಗಳು ತುಂಬಾ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ ಆದ್ದರಿಂದ ಅಲ್ಲಿದ್ದ ಕಟ್ಟಡ ತೆರವುಗೊಳಿಸಿ ಆ ಜಾಗದಲ್ಲಿ ದೊಡ್ಡ ವ್ಯಾಪಾರ ಸಂಕಿರ್ಣ ಕಟ್ಟಲು ನಗರಸಭೆ ತಯಾರಿ ನಡೆಸಿದೆ. ನೀಲ ನಕ್ಷೆಯ ತಯಾರಿ ನಡೆದಿದ್ದು
ಆದರೆ ಈಗ ಆ ಸ್ಥಳದಲ್ಲಿ ಸುಮಾರು 80 ವರ್ಷಗಳಿಂದ ವ್ಯಾಪಾರ ಮಾಡುತ್ತ ಬಂದಿರುವ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸುತಿದ್ದಾರೆ.ಹೊಸ ವ್ಯಾಪಾರ ಸಂಕಿರ್ಣದಲ್ಲಿ ನಮಗೆ ಸ್ಥಳಾವಕಾಶ ನೀಡಿದರೆ ಮಾತ್ರ ನಮ್ಮ ಈ ಹಳೆಯ ಕಟ್ಟಡ ತೆರವಿಗೆ ಅನುಮತಿ ನೀಡುತ್ತೇವೆ ಎಂದು ಪ್ರತಿಭಟಿಸಿದರು.

Leave a Comment