ಕಾರವಾರ:
ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು,ಕಾರವಾರದ ವಾರ್ಷಿಕ ಸ್ನೇಹ ಸಮ್ಮೇಳನವು ಇಂದು ಜರುಗಿತು. ಈ ಕಾರ್ಯಕ್ರಮವನ್ನು ಕಾರವಾರದ ಶಾಸಕರಾದ ಸತೀಶ್ ಸೈಲ್ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಡಾ. ಅನಿಲ್ ಗಾಂವಕಾರ್ (ಮಾಜಿ ಉಪಾಧ್ಯಕ್ಷರು. ಆರ್ & ಡಿ. ಕ್ಯಾಡ್ಬರಿ ಇಂಡಿಯಾ), ಸಚಿನ್ ಕೌಶಿಕ್ (ನಿಯೊಜಿತ ಜಿಲ್ಲಾ ನ್ಯಾಯಾಧೀಶರು) ಹಾಗೂ ರತ್ನಾಕರ ನಾಯ್ಕ(ಸದಸ್ಯರು ನಗರಸಭೆ, ಕಾರವಾರ) ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಲ್ಪನಾ ಕೆರವಡಿಕರ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತರನ್ನು ಸನ್ಮಾನಿಸಲಾಯಿತು. ನಂತರ ವಿಧ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
Leave a Comment