ಕಾರವಾರ :
ಗಾಂಧಿ ಮಾರುಕಟ್ಟೆಯಲ್ಲಿರುವ ಕಟ್ಟಡ ತೆರವು ಕಾರ್ಯಾಚರಣೆ ವಿರೋಧಿಸಿ ಇಲ್ಲಿನ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕಟ್ಟಡ ತೆರವಿಗೆ ವಿರೋಧ ವ್ಯಕ್ತಪಡಿಸಿದರು.
ವ್ಯಾಪಾರಿಗಳು ಕರೆನೀಡಿದ ಬಂದ್ ಗೆ ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ ಕಾರಣ ಇಂದು ಕಾರವಾರದಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ಸ್ಥಗಿತ ಗೊಂಡಿತ್ತು. ಹೋಟೆಲ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿಸಿತ್ತಾದರೂ ಕೆಲ ಅಂಗಡಿ ವ್ಯಾಪಾರಿಗಳೇ ತಮ್ಮ ಅಂಗಡಿ ತೆರೆದು ವ್ಯಾಪಾರ ಮಾಡುವ ಮೂಲಕ ಬಂದ್ ಗೆ ಬೆಂಬಲ ವ್ಯಕ್ತಪಡಿಸದೇ ಇರುವದು ಕಂಡುಬಂತು. ಆದ್ದರಿಂದ ಕಾರವಾರ ಬಂದ್ ಕೇವಲ ಗಾಂಧಿ ಮಾರುಕಟ್ಟೆಗೆ ಮಾತ್ರ ಸೀಮಿತವಾದಂತಿತ್ತು.
ಒಟ್ಟಾರೆಯಾಗಿ ಮಾರುಕಟ್ಟೆಯ ಶಿಥಿಲಾಸ್ಥೆಯ ಕಟ್ಟಡ ತೆರವಿಗೆ ವಿರೋಧಿಸಿ ವ್ಯಾಪಾರಿಗಳೂ ಕರೆ ನೀಡಿದ ಬಂದ್ ಗೆ ಹೋಟೆಲ್ ಗಳು ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು , ಹೋಟೆಲ್ ಗಳನ್ನು ಹೊರತು ಪಡಿಸಿ ಉಳಿದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ

Leave a Comment