• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಲಿತ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ,ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’

May 3, 2017 by Ganapati Hegde Leave a Comment

ಕುಂದಾಪುರ:
ಅವರಿಬ್ಬರು ಒಂದೇ ಊರಿನವರು. ಅಷ್ಟೇ ಅಲ್ಲ ಒಂದೇ ಕೇರಿಯವರು. ಅದ್ಯೇಗೋ ಅವರ ನಡುವೆ ಪ್ರೇಮ ಕಹಾನಿ ಸ್ಟಾರ್ಟ್ ಆಗಿತ್ತು. ಅದು ಸುಮಾರು ಎರಡು ವರ್ಷದ ಲವ್ವು. ಮದುವೆಗೆ ಹುಡುಗನ ಕಡೆಯವರು ಓಕೆ ಅಂದ್ರೂ ಕೂಡ ಯುವತಿ ಮನೆಯವರು ಅಡ್ಡಿಯಾದ್ರು. ಆದ್ರೂ ಕೂಡ ಜಾತಿ-ಧರ್ಮದ ಮುಲಾಜೇ ಇಲ್ಲದ ಈ ಮದುವೆ ನಡೆದು ಹೋಯ್ತು. ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ನನಗೆ ನೀನು..ನಿನಗೆ ನಾನು..ಹೀಗೆ ಪರಸ್ಪರ ಹಾರ ಬದಲಾವಣೆ ಮಾಡಿಕೊಂಡು ಖುಷಿಖುಷಿಯಾಗಿರುವ ಇವರಿಬ್ಬರು ಇಂದು ಹಸೆಮಣೆ ಏರಿದ ನವಜೋಡಿಗಳು. ಕುಂದಾಪುರದ ಕುಂಭಾಸಿಯ ವಿನಾಯಕ ನಗರದ ಇಬ್ಬರು ಕೂಡ ಒಂದೇ ಕಾಲನಿಯವರು. ಪರ್ನೀಚರ್ ಕೆಲಸ ಮಾಡಿಕೊಂಡಿರುವ ವಿವೇಕ್ ಹಾಗೂ ಖಾಸಗಿ ಶಾಲೆಯಲ್ಲಿ ಅಟೆಂಡರ್ ಆಗಿರೋ ಸಲ್ಮಾ ನಡುವೆ ಶುಭ ಸಮಾರಂಭವೊಂದರಲ್ಲಿ ಪರಿಚಯವಾಗಿತ್ತು. ಆ ಪರಿಚಯ ಬಾಂಧವ್ಯಕ್ಕೆ ತಿರುಗಿ ಇಬ್ಬರು ಪರಸ್ಪರ ಪ್ರೇಮಿಸೋಕೆ ಆರಂಭಿಸಿದ್ರು. ಹೀಗೆ ಎರಡು ವರ್ಷಗಳ ಕಾಲ ಇವರ ಪ್ರೇಮ ಕಹಾನಿ ಯಾವುದೇ ಆತಂಕವಿಲ್ಲದೇ ಸಾಗಿತ್ತು.ಸಲ್ಮಾ ಮನೆಯವರ ವಿರೋಧ…ಈ ಪ್ರೇಮಿಗಳು ಮದುವೆಯಾಗೋಕೆ ನಿರ್ಧಾರ ಮಾಡಿದ್ದೇ ತಡ ಸಲ್ಮಾ ಮನೆಯವರು ಈ ಮದುವೆಗೆ ವಿರೋಧ ಮಾಡಿದ್ರು. ಮದುವೆ ಆಗೋದೆ ಆದ್ರೇ ಮುಸ್ಲೀಂ ಧರ್ಮಕ್ಕೆ ಮತಾಂತರವಾಗಬೇಕೆಂಬ ತಾಕೀತು ಮಾಡಿದ್ರು. ಆದರೇ ಇದಕ್ಕೆಲ್ಲಾ ಕ್ಯಾರೇ ಅನ್ನದ ಸಲ್ಮಾ ತಾನು ಮದುವೆಯಾದ್ರೇ ವಿವೇಕನನ್ನೇ ಎಂದು ಚಾಲೇಂಜ್ಮಾಡ್ತಾರೆ. ಮಗನ ಮದುವೆಗೆ ವಿವೇಕನ ಮನೆಯವರು ಫುಲ್ ಸಾತ್ ಕೊಡ್ತಾರೆ. ಸಲ್ಮಾ ಮನೆಯವರು ಹಾಗೂ ಅವರ ಧರ್ಮದ ಮುಖಂಡರು ಮದುವೆಗೆ ಒಪ್ಪಿಗೆ ಕೊಡಲ್ಲ. ಇವರ ಟಾರ್ಚರ್ ಜಾಸ್ಥಿಯಾದಾಗ ಆಕೆ ಹಾಗೂ ವಿವೇಕ್ ಕುಂದಾಪುರದ ಸಾಂತ್ವಾನಮಹಿಳಾ ಸಹಾಯವಾಣಿ ಕೇಂದ್ರದ ಹೆಲ್ಪ್ ಕೇಳಿ ಬರ್ತಾರೆ. ಅಲ್ಲಿಯೇ ಸಿಕ್ಕಿದ್ದು ಇವರ ಮದುವೆಗೆ ಗ್ರೀನ್ ಸಿಗ್ನಲ್.ಸಹಾಯ ಮಾಡಿದ ರಾಧಾದಾಸ್….ಸಾಂತ್ವಾನ ಕೇಂದ್ರಕ್ಕೆ ಬಂದ ಬಳಿಕವೂ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಇವರ ಪ್ರೇಮ ಕಹಾನಿ ಕೇಳಿ ಇದಕ್ಕೆ ಸಪೋರ್ಟ್ ಮಾಡುವ ಭರವಸೆ ಕೊಡ್ತಾರೆಮತ್ತು ಮದುವೆ ಬಗ್ಗೆ ಎರಡು ಕುಟುಂಬದವರ ಬಳಿಯೂ ಮಾತನಾಡುತ್ತಾರೆ. ಯುವಕನ ಮನೆಯವರು ಇದಕ್ಕೆ ಓಕೆ ಅಂದ್ರೂಕೂಡ ಯುವತಿಯ ಮನೆಯವರು ಇದಕ್ಕೆ ಸುತರಾಂ ಒಪ್ಪಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮಾತನ್ನಾಡಿದ ಈ ಪ್ರೇಮಿಗಳಿಗೆ ಕೊನೆಗೂ ಮದುವೆ ಮಾಡಿಸುವ ಭರವಸೆಯನ್ನು ರಾಧಾದಾಸ್ ಕೊಟ್ಟು ಕಳುಹಿಸಿ ಮಂಗಳವಾರ ಮದುವೆಗೆ ಡೇಟ್ ಫಿಕ್ಸ್ ಮಾಡ್ತಾರೆ.ಸಿಂಪಲ್ಲಾಗಿ ಒಂದು ಮ್ಯಾರೇಜ್ ಸ್ಟೋರಿ….ಅಂತೆಯೆ ಇಂದು(ಮಂಗಳವಾರ) ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಮದುವೆ ನಡಿತು. ಮೊದಲಿಗೆ ವಧು-ವರ ಹಾರ ಬದಲಾಯಿಸಿಕೊಂಡರು. ವಿವೇಕ್ ಸಲ್ಮಾಳಿಗೆ ತಾಳಿ ಕಟ್ಟೊ ಮೂಲಕ ಸರಳವಾಗಿ ವಿವಾಹವಾದ್ರು. ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿ ಮಾಂಗಲ್ಯಂ ತಂತುನಾನೇನಾ ಮಂತ್ರ ಹೇಳಿದ್ರು. ಸಿಂಪಲ್ಲಾಗಿ ನಡೆದ ಈ ಮದುವೆಯಲ್ಲಿ ವಿವೇಕನ ಗೆಳೆಯರು ಹಾಗೂ ಕುಂದಾಪುರದ ಕೆಲವು ಮಂದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ರು. ಬಂದವರಿಗೆ ಕೂಲ್ ಡ್ರಿಂಕ್ಸ್ನೀಡುವ ಮೂಲಕ ತುಂಬಾನೇ ಸಿಂಪಲ್ಲಾಗಿ ಈ ಮ್ಯಾರೇಜ್ ಮುಗಿತು. ಸದ್ಯ ಸಲ್ಮಾಳ ಮನೆಯವರಿಂದ ಸಮಸ್ಯೆಯಾಗುವ ಭಯ ಈ ನವಜೋಡಿಗಿದ್ದು ವಿವೇಕನ ಜೊತೆಗೆ ಸುಂದರ ಜೀವನ ನಡೆಸಲು ಆಕೆ ಮುಂದಾಗಿದ್ದಾಳೆ.ಒಟ್ಟಿನಲ್ಲಿ ಜಾತಿ ಧರ್ಮದ ಎಲ್ಲೆ ಮೀರಿ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ. ಇವರಿಬ್ಬರ ಜೀವನ ಹಸನಾಗಲಿ. ಆಲ್ ದಿ ಬೆಸ್ಟ್ ಅನ್ನೋದು ನಮ್ಮೆಲ್ಲರ ಹಾರೈಕೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ‘ಸಿಂಪಲ್ ಮ್ಯಾರೇಜ್ ಸ್ಟೋರಿ’, ಕುಂದಾಪು, ಕುಂದಾಪುರ, ಕೈ, ದಲಿತ, ನಡೆದ, ಮುಸ್ಲಿಂ, ಯುವಕನ, ಯುವತಿ, ಹಿಡಿದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar