• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಕಟಿಬದ್ದ, ಶಾಸಕಿ ಶಾರದಾ ಎಂ. ಶೆಟ್ಟಿ

May 3, 2017 by Gaju Gokarna Leave a Comment

ಹೊನ್ನಾವರ ;

ದೇಶÀದ ಅಭಿವೃದ್ಧಿಗೆ ಮಹÀತ್ವದ ಪಾತ್ರವಹಿಸುತ್ತಿರುವ ಕಾರ್ಮಿಕರ ಶ್ರಮ ಮಹÀತ್ತರವಾಗಿದ್ದು, ಕೂಲಿ ಕಾರ್ಮಿಕರ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ನಾನು ಸದಾ ಸಿದ್ದನಾಗಿದ್ದೇನೆ ಎಂದು ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೇಳಿದರು. ಅವರು ಕಳೆದ ರವಿವಾರ ಹೊನ್ನಾವರದ ಪೋಲಿಸ್ ಮೈದಾನದಲ್ಲಿ ಶ್ರೀ ನವಜ್ಯೋತಿ ಕೂಲಿಕಾರ್ಮಿಕರ ಹೋರಾಟ ಸಂಘದ 7ನೇ ವರ್ಷದ ತಾಲೂಕಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೇ 1 ಕಾರ್ಮಿಕರ ದಿನಾಚರಣೆ ಕಾರ್ಮಿಕರಿಗೆ ಮಹತ್ತರ ದಿನವಾಗಿದ್ದು, ಜಗತ್ತಿನಾದ್ಯಂತ ಕಾರ್ಮಿಕರು ಸಂಘಟಿತರಾಗಿ ತಮ್ಮ ನ್ಯಾಯಬದ್ಧ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಕಾರ್ಮಿಕರ ಹಿತ ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದ್ದು, ಕಾರ್ಮಿಕರ ನ್ಯಾಯಯುತ ಬೇಡಿಕೆಗೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಸೇರಿದ ಸಹಸ್ರಾರು ಕಾರ್ಮಿಕರಿಗೆ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿಯುವ ನಾಯಕ, ಉದ್ಯಮಿ ರವಿಕುಮಾರ ಶೆಟ್ಟಿ ಮಾತನಾಡಿÀ ಹಿಂದಿನ ದಿನಗಳಲ್ಲಿ ಜಾತಿ ಆದಾರದ ಮೇಲೆ ಕುಲಕಸುಬುಗಳನ್ನು ಮಾಡುವುದು ಆಯಾಜಾತಿಗೆ ಸೀಮಿತವಾಗಿತ್ತು.ಆದರೆ ಇಂದು ಕಾರ್ಮಿಕರು ಸಂಘಟಿತರಾಗಿ ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಂದಾಗಿ ತಮ್ಮ ವೃತ್ತಿಯಲ್ಲಿ ಶ್ರಮಿಸುತ್ತಿದ್ದು ಸಮಾಜಕ್ಕೆ ಕಾರ್ಮಿಕರು ಮಾದರಿಯಾಗಿ ನಿಂತಿದ್ದಾರೆ ಎಂದರು.
ಕಾರ್ಮಿಕ ಮುಖಂಡ ಜಿಲ್ಲಾ ಸಿ.ಐ.ಟಿ.ಯು. ಅಧ್ಯಕ್ಷ ತಿಲಕ ಗೌಡ ಮಾತನಾಡಿ ಕಾರ್ಮಿಕರ ಮೇಲೆ ಬಂಡವಾಳ ಶಾಹಿಗಳಿಂದ ದೌರ್ಜನ್ಯ ನಡೆಯುತ್ತಿದೆ. ಸಮಾ£ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರಿಂ ಕೋರ್ಟ ಆದೇಶವಿದ್ದರು, ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಾ ಎಂದು ಆರೊಪಿಸಿದರು.
ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರೀ ಮಾತನಾಡಿ ಕಾರ್ಮಿಕರ ಶ್ರಮವಿಲ್ಲದೇ ದೇಶ ಒಂದು ದಿನವು ಮುನ್ನಡೆಯಲು ಸಾದ್ಯವಿಲ್ಲ. ವಿಶೇಷವಾಗಿ ಮಹಿಳಾ ಕಾರ್ಮಿಕರು ತಮ್ಮ ಹಕ್ಕಿಗಾಗಿ ಇನ್ನು ದೊಡ್ಡ್ಡ ಪ್ರಮಾಣದ ಹೊರಾಟ ನಡೆಸುವುದು ಅನಿವಾರ್ಯವಾಗಿದೆ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ ಮಾತನಾಡಿ ನವಜ್ಯೋತಿ ಕಾರ್ಮಿಕ ಸಂಘ ಸ್ಥಾಪನೆಯಾದ ದಿನದಿಂದಲೂ ಸಂಘಟನೆಯ ಏಳ್ಗೆಗೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಸಂಘಟನೆಯಲ್ಲಿರುವ ಎಲ್ಲಾ ಕೂಲಿ ಕಾರ್ಮಿಕರು ನ್ಯಾಯಬದ್ದ ಹೋರಾಟ ನಡೆಸುತ್ತಿದ್ದಾರೆ ಎಂದರು.
ತಾಲೂಕಾ ಪಂಚಾಯತ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಮಾತನಾಡಿ ನವಜ್ಯೋತಿ ಕೂಲಿ ಕಾರ್ಮಿಕ ಸಂಘಕ್ಕೆ ಶುಭಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್. ತೆಂಗೇರಿ ಮಾತನಾಡಿ ಕೂಲಿ ಕಾರ್ಮಿಕರು ತುಂಬಾ ಮುಗ್ದ ಮನಸ್ಥಿತಿಯವರಾಗಿದ್ದಾರೆ. ಇಂತಹ ಕೂಲಿ ಕಾರ್ಮಿಕರ ಕುಟುಂಬದ ಸ್ಥಿತಿ ಅತಂತ್ರವಾಗಿದ್ದು ನವಜ್ಯೋತಿ ಕೂಲಿ ಕಾರ್ಮಿಕರ ಸಂಘಟನೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿರುವುದು ತೀರಾ ಶ್ಲಾಘನೀಯ ಕಾರ್ಯ ಎಂದರು.
ನಿವೃತ್ತ ಶಿಕ್ಷಕ ಎನ್. ಕೆ. ನಾಯ್ಕ ಮಾತನಾಡಿ 132 ನೇ ಕಾರ್ಮಿಕ ದಿನಾಚರಣೆ ಆಚರಿಸುತ್ತಿರುವ ಜಗತ್ತಿನ ಎಲ್ಲಾ ಕಾರ್ಮಿಕ ಸಂಘಟನೆಗಳಿಗೆ ಶುಭಾಶಯ ಸಲ್ಲಿಸಿದರು. ಕಾರ್ಮಿಕ ಸಂಘಟನೆಯ ಸ್ಥ್ಥಾಪನೆಯ ದಿನಗಳ ಬಗ್ಗೆ ವಿವರವಾಗಿ ಮಾತನಾಡುತ್ತಾ ಬಂಡವಾಳ ಶಾಹಿ ಕೈಗಾರಿಕೋದ್ಯಮಗಳಿಂದ ಕಾರ್ಮಿಕರು ಅನುಭವಿಸಿದ ಹಿಂಸೆ, ಯಾತನೆ ಬಗ್ಗೆ ವಿವರಿಸಿ ನಾವೆಲ್ಲರೂ ಕೂಲಿ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಮಾತನಾಡಿÀ ತಾವು ಕೂಡ ಕೂಲಿ ಕಾರ್ಮಿಕ ಕುಟುಂಬದಿಂದ ಬಂದಿದ್ದು ಮನೆಗೆ ವಿದ್ಯುತ್ ದೀಪದ ಸಂಪರ್ಕವಿಲ್ಲದ ದಿನವನ್ನು ನೆನೆಸಿದರು. ಆದ್ದರಿಂದ ನಾನು ಬಡವರು, ನಿರ್ಗತಿಕರ ಶಿಕ್ಷಣದ ಕುರಿತು ವಿಶೇಷ ಆಸಕ್ತಿ ಹೊಂದಿದ್ದು ಬಡತನವನ್ನು ಮೀರಿ ಕೂಲಿ ಕಾರ್ಮಿಕರ ಮಕ್ಕಳು ಉನ್ನತ ವಿದ್ಯಾಭ್ಯಾಸ ಹೊಂದಲು ಮುಂದೆ ಬರಬೇಕು ಎಂದು ಸೇರಿದ ಕಾರ್ಮಿಕರಿಗೆ ಕರೆ ನೀಡಿ, ಏಷ್ಟೇ ವೆಚ್ಚದಾಯಕ ಶಿಕ್ಷಣ ಹೊಂದಲು ತಾವು ಮುಂದೆ ಬಂದಲ್ಲಿ ನಾನು ತಮ್ಮ ಬೆನ್ನೆಲುಬಾಗಿ ನಿಲ್ಲಲು ಸಿದ್ದ ಎಂದರು
ಸಮಾರಂಭದಲ್ಲಿ ಕಾರ್ಮಿಕರ ಧುರೀಣ ತಿಲಕ ಗೌಡ, ಅಶೋಕ ಜಾದುಗಾರ ಎಂದೇ ಪ್ರಸಿದ್ದರಾಗಿರುವ ಅಶೋಕ ಮಡಿವಾಳ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ ಕೆ. ಜೆ. ಗೌಡರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಸಂಘದ ಪದಾಧಿಕಾರಿಗಾಳದ ಎನ್. ಗಣಪತಿ, ಮಂಜುನಾಥ ಖಾರ್ವಿ, ಮಾರಿಕಾಂಬಾ ಮೋಟಾರ್ಸನ ಉಮೇಶ ಶೆಟ್ಟಿ, ಪ್ರದೀಪ್ ಶೆಟ್ಟಿ, ಮಧುಕೇಶ್ವರ ಬಾಣೇಕರ್, ರಾಜು ಮೇಸ್ತ, ವೆಂಕಟೇಶ ಮೇಸ್ತ, ಸಂಘಟನೆಯ ಮಹಿಳಾಧ್ಯಕ್ಷೆ ಅಂಬಿಗಾ ಇನ್ನೂ ಮುಂತಾದವರಿದ್ದರು.
ನವಜ್ಯೋತಿ ಕೂಲಿಕಾರ್ಮಿಕ ಸಂಘದ ಸಂಸ್ಥಾಪಕ ಅಧ್ಯಕ್ಷ ಕೇಶವ ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಶ್ರೀಕಾಂತ ಮೇಸ್ತ ಎಲ್ಲರನ್ನು ಸ್ವಾಗತಿಸಿದರು. ಸಂಘದ ಶ್ರೀರಾಮ್ ಜಾದುಗಾರ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಆಸಕ್ತಿ, ಎಂ. ಶೆಟ್ಟಿ, ಕಟಿಬದ್ದ, ಕಾರ್ಮಿಕರ, ಕ್ರೀಡಾ, ಕ್ಷೇತ್ರ, ವರ್ಗ, ಶಾರದಾ, ಶಾಸಕಿ, ಶ್ರಮ, ಶ್ರಮಿಕ, ಶ್ರೇಯೋಭಿವೃದ್ಧಿ, ಸರಕಾರ, ಸಾಧನೆ, ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar