• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿಂದು ರುದ್ರಭೂಮಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಬಿಜೆಪಿ ಎಸ್.ಸಿ.ಮೋರ್ಚಾದಿಂದ ಮನವಿ

May 8, 2017 by Sachin Hegde Leave a Comment

ದಾಂಡೇಲಿ:

ನಗರದ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸುವುದು ಮತ್ತು ನಗರದಲ್ಲಿ ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಎಲ್ಲೊಂದರಲ್ಲಿ ಇರುವ ಅವೈಜ್ಞಾನಿಕ ಹಂಪ್ಸ್‍ಗಳಿಗೆ ಬಣ್ಣ ಹಚ್ಚುವುದರ ಜೊತೆಯಲ್ಲಿ ಪಂಪ್ಸ್ ಇರುವುದರ ಬಗ್ಗೆ ಫಲಕವನ್ನು ಅಳವಡಿಸುವಂತೆ ನಗರದ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ದಶರಥ ಬಂಡಿವಡ್ಡರ ಅವರ ನೇತೃತ್ವದಲ್ಲಿ ಪೌರಾಯುಕ್ತ ಜತ್ತಣ್ಣ ಅವರಿಗೆ ಸೋಮವಾರ ಮನವಿ ನೀಡಿ ಆಗ್ರಹಿಸಲಾಯಿತು.

ಪೌರಾಯುಕ್ತರಿಗೆ ನೀಡಿದ ಮನವಿಯಲ್ಲಿ ನಗರದ ಬಹುಸಂಖ್ಯಾತ ಹಿಂದು ಸಮುದಾಯದ ಜನತೆ ತಮ್ಮವರ ಕೊನೆಯ ಅಂತಿಮ ಶವ ಸಂಸ್ಕಾರವನ್ನು ನಗರದ ಪಟೇಲ್ ನಗರದ ಹಿಂದು ರುದ್ರÀಭೂಮಿಯಲ್ಲಿ ನೇರವೇರಿಸಿಕೊಂಡು ಬರುತ್ತಿದೆ. ಆದರೆ ಈ ಹಿಂದು ರುದ್ರ ಭೂಮಿಯು ಅವ್ಯವಸ್ಥೆಯ ಅಗಾರವಾಗಿ ಮಾರ್ಪಡುತ್ತಿದ್ದು, ಈ ಬಗ್ಗೆ ನಗರ ಸಭೆ ಗಂಭೀರ ಕ್ರಮ ಕೈಗೊಳ್ಳಬೇಕಾಗಿದೆ.

ಹಿಂದು ರುದ್ರಭೂಮಿ ಕಟ್ಟಡದ ಮೇಲ್ಚಾವಣಿಂiÀi ಸಿಮೆಂಟ್ ಸೀಟ್ ಸಂಪೂರ್ಣ ಕೆಡವಿ ಹೋಗಿದ್ದು, ಮಳೆಗಾಲದ ಸಂದರ್ಭದಲ್ಲಿ ಶವ ಸುಡಲು ತೀವ್ರ ತೊಂದರೆಯಾಗಲಿದೆ. ಹಾಗಾಗಿ ತುಂಡಾಗಿರುವ ಸಿಮೇಂಟ್ ಸೀಟನ್ನು ಬದಲಾಯಿಸಿ ಹೊಸದಾಗಿ ಸಿಮೇಂಟ್ ಸೀಟನ್ನು ಹಾಕಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ.

ಇನ್ನೂ ಅಲ್ಲಿ ಏಕಕಾಲದಲ್ಲಿ ಮೂರು ಶವಗಳನ್ನು ಸುಡುವ ಅವಕಾಶವಿದ್ದರೂ, ಪ್ರಸಕ್ತ ಅಲ್ಲಿ ಒಂದು ಶವವನ್ನಷ್ಟೆ ಸುಡಲು ಅವಕಾಶವಿರುತ್ತದೆ. ಉಳಿದಂತೆ ಇನ್ನೂಳಿದ ಶವಗಾರದ ಕಬ್ಬಿಣದ ಸಲಾಕೆಗಳು ತುಂಡಾರಿಸಿಹೋಗಿದ್ದು, ಅದು ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ. ಆದ್ದರಿಂದ ಅಲ್ಲಿರುವ ಮೂರು ಶವಗಾರವನ್ನು ಸರಿ ಪಡಿಸಿ ಹಿಂದು ಧರ್ಮ ಬಾಂಧವರ ಬೇಡಿಕೆ ಯನ್ನು ಈಡೇರಿಸಿ, ಹಿಂದು ಧರ್ಮಿಯರ ಅಂತಿಮ ಯಾತ್ರೆಗೆ ಸಕಲ ರೀತಿಯ ಮೂಲಕ ಸೌಕರ್ಯವನ್ನು ಒದಗಿಸಿಕೊಟ್ಟು ಹಿಂದು ರುದ್ರಭೂಮಿಯನ್ನು ವ್ಯವಸ್ಥಿತವನ್ನಾಗಿಸಲು ನಗರ ಸಭೆ ತುರ್ತು ಮತ್ತು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಅವೈಜ್ಞಾನಿಕ ರಸ್ತೆ ಹಂಪ್‍ಗಳಿದ್ದು, ಬಹಳಷ್ಟು ಭಾರಿ ಅನಹುತ, ಅಪಘಾತಗಳು ಸಂಭವಿಸಿವೆ. ಇದೇ ಹಂಪ್ಸ್ ನಿಂದಾಗಿ ಮೂರ್ನಾಲ್ಕು ಜನ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಸುಭಾಸ ನಗರದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕ ಹಂಪ್ಸ್‍ಗಳಿಗೆ ಬಣ್ಣ ಹಚ್ಚುವುದರ ಜೊತೆಯಲ್ಲಿ ಹÀಂಪ್ಸ್ ಇರುವುದರ ಬಗ್ಗೆ ಫಲಕವನ್ನು ಅಳವಡಿಸಬೇಕೆಂದು, ಈ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ದಶರಥ ಬಂಡಿವಡ್ಡರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಹರಿಜನ, ಪದಾಧಿಕಾರಿಗಳಾದ ಭೀಮಶಿ ಬಾದೂಲಿ, ಪ್ರತಾಪ ಚಿಮಕುಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರಫೀಕ ಹುದ್ದಾರ, ಪಕ್ಷದ ಮುಖಂಡರುಗಳಾದ ಅಬ್ದುಲ ವಹಾಬ ಬನ್ಸಾರಿ, ಮಂಜುನಾಥ ಲಮಾಣಿ, ಅರ್ಜುನ ಕಾಂಬ್ಳೆ, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶಂಕರ ಗಣಚಾರಿ ಮೊದಲಾದವರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಅಭಿವೃದ್ಧಿ, ಅವೈಜ್ಞಾನಿಕ, ಅವ್ಯವಸ್ಥೆ, ಎಸ್.ಸಿ.ಮೋರ್ಚಾ, ದಾಂಡೇಲಿ, ದಿಂದ, ಪಂಪ್ಸ್, ಪೌರಾಯುಕ್ತ, ಪ್ರತಾಪ ಚಿಮಕುಟ್ಟಿ, ಬಿಜೆಪಿ, ಭೀಮಶಿ ಬಾದೂಲಿ, ಮನವಿ, ಮಳೆಗಾಲ, ರುದ್ರಭೂಮಿ, ವಿಶ್ವ ಹಿಂದು ಪರಿಷತ್, ಶವ, ಸಿಮೆಂಟ್, ಸೀಟ್, ಸುಡಲು, ಹಿಂದು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar