ಭಟ್ಕಳ:
ಇಲ್ಲಿನ ಆನಂದ ಆಶ್ರಮ ಪಿ.ಯು.ಸಿ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ವಿ. ಫಲಿತಾಂಶ ಶೇ.100 ಆಗಿದ್ದು ವಾಣಿಜ್ಯ ವಿಭಾಗದಲ್ಲಿ ಶೇ.91.66 ಆಗಿದೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು 13 ಅತ್ಯುನ್ನತ ಶ್ರೇಣಿ, 23 ಪ್ರಥಮ ದರ್ಜೆ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಓರ್ವ ಅತ್ಯುನ್ನತ ಶ್ರೇಣಿ, 17 ಪ್ರಥಮ ಶ್ರೇಣಿ, 3 ದ್ವಿತೀಯ ಶ್ರೇಣಿ ದರ್ಜೆ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸೋಬಿಯಾ ಮೊಮಿನ್ ಶೇ.97.33, ದೀಪಿಕಾ ಲಚ್ಮಯ್ಯ ನಾಯ್ಕ ಶೇ.91.33, ರಚಿತಾ ಎನ್.ಜಿ. ಶೇ.90.83, ನಮೀನ್ ಖಾನಮ್ ಶೇ.90.66, ಮೇಘಾ ಅಣ್ಣಪ್ಪ ನಾಯ್ಕ ಶೇ.90.33, ಮಹಾಮಾಯಾ ಸತೀಶ ನಾಯಕ ಶೇ.90. ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರೀತಿಕಾ ಎಸ್. ಡಿಸೋಜ, ಶೇ.86,66, ಸ್ವಲೇಹಾ ಶೇ.84.33, ಮೊಹಮ್ಮದ್ ಅಮಾರ್ ಶೇ.79.66 ಅಂಕಗಳನ್ನು ಗಳಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಾಗಿದ್ದಾರೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಥೆರೆಸಿಯಾ ಸೆರಾ, ಬೋಧಕ ವೃಂದ ಅಭಿನಂದಿಸಿದೆ
ರಚಿತಾ ಎನ್.ಜಿ. ಮೇಘಾ ನಾಯ್ಕ. ಸೊಬಿಯಾ ಮೊಮಿನ್.
ಮಹಾಮಾಯಾ ನಾಯಕ ದೀಪಿಕಾ ಲಚ್ಮಯ್ಯ ನಾಯ್ಕ ನಮೀನ್ ಖಾನಮ್
Leave a Comment