ಹೊನ್ನಾವರ:
ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನನಲ್ಲಿ ಪಿಯುಸಿ ಪರಿಕ್ಷೆಯಲ್ಲಿ ಒಟ್ಟೂ 166 ರಲ್ಲಿ 157 ವಿದ್ಯಾರ್ಥಿಗಳು ತೆರ್ಗಡೆಗೊಂಡಿದ್ದು, ಶೇ. 94.5 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 87 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ, ವಿಜ್ಞಾನ ವಿಭಾಗದ 33 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 97 ಫಲಿತಾಂಶ ಹಾಗೂ ಕಲಾ ವಿಭಾಗದ 47 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 83 ಫಲಿತಾಂಶ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ನಿವೇದಿತಾ ನಾಯ್ಕ ಶೇ. 84.9, ಅಕ್ಷತಾ ಗೌಡ ಶೇ. 84, ರಾಮಚಂದ್ರ ಮರಾಠಿ ಶೇ. 81 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಪೂರ್ವ ಬಾಂದೆಕರ್ ಶೇ. 93.5, ಪೂಜಾ ಗೌಡ ಶೇ. 93.3, ವಿನುತಾ ನಾಯ್ಕ 91.5, ವಿಜ್ಞಾನ ವಿಭಾಗದಲ್ಲಿ ಪ್ರಿಯಾಂಕ ಹೆಗಡೆ ಶೇ. 91, ರಾಮಕುಮಾರ ನಾಯ್ಕ ಶೇ. 90.6, ಶಿವಾನಂದ ಮಡಿವಾಳ ಶೇ. 90.5 ಅಂಕ ಪಡೆದಿದ್ದಾರೆ
ಅಪೂರ್ವ ಬಾಂದೆಕರ್ ಪ್ರಿಯಾಂಕ ಹೆಗಡೆ ನಿವೇದಿತಾ ನಾಯ್ಕ
Leave a Comment