ಭಟ್ಕಳ:
ಇಲ್ಲಿನ ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶೇ.95.3 ಫಲಿತಾಂಶ ಬಂದಿದ್ದು 51 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು 20 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ನಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶ ಬಂದಿದೆ. ಶಾಲೆಯಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ 149 ವಿದ್ಯಾರ್ಥಿಗಳಲ್ಲಿ 142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಪೂರ್ವಿ ನಾಯ್ಕ ಶೇ.99.2 ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಶ್ರೇಯಾಂಕ ಶ್ರೀಧರ ಶೇಟ್ ಶೇ.98.56 ಶಾಲೆಗೆ ದ್ವಿತೀಯ, ಕಾರ್ತಿಕ್ ಎಸ್. ಬಿ. ಶೇ.98.4 ಶಾಲೆಗೆ ತೃತೀಯ ಸ್ಥಾನ ಗಳಿಸಿದ್ದಾನೆ. ಕಾವ್ಯ ಶೇ.98.2, ಅಹಮ್ಮದ್ ಫಿರಾಜ್ ಶೇ.97.9, ವೇದಾ ಬಾಬು ಮೊಗೇರ ಶೇ.97.9, ವೈಷ್ಣವಿ ಎಚ್.ಪಿ. ಶೇ.97.7, ಕೀರ್ತನಾ ಪೈ ಶೇ.97.6, ಸುಮೇಧಾ ಪಿ. ಪೈ ಶೇ. 97.28, ಸಹರ್ ಶೇಖ್ ಶೇ.97.12, ಚರಣ್ ಪಟಗಾರ್ ಶೇ.97.12, ವೃಂದಾ ಆರ್. ಜೋಗಿ ಶೇ.96.9, ರಾಹುಲ್ ಶಿರೂರ್ಕರ್ ಶೇ.96.8, ವಿಘ್ನೇಶ ವಿ. ಸರಾಫ್ ಶೇ.96.8, ನಯನಾ ಆರ್. ನಾಯ್ಕ ಶೇ.96.8, ಸುಬ್ರಹ್ಮಣ್ಯ ಆರ್. ನಾಯ್ಕ ಶೇ.96.6, ಪವನ್ ಆರ್. ಶೆಟ್ಟಿ ಶೇ.96.1, ಆದಿತ್ಯ ಮೋಹನ ನಾಯ್ಕ ಶೇ. 96, ವಿನುಷಾ ಮೊಗೇರ ಶೇ.96, ಶಿಹಾಬುದ್ದೀನ್ ಖಾನ್ ಶೇ.95.8, ಹರ್ಷಲಾ ಶೇ.95.8, ನಿಸಾನ್ ಅರುಣ್ ನಾಯಕ ಶೇ.95.6, ಸಾಲಿಕಾ ಫರ್ಹೀನ್ ಶೇ.95.6, ಶ್ರೇಯಸ್ ಶೇ.95.68, ಮೈಥಿಲಿ ನಾಯಕ ಶೇ.95.3, ನಿಯೋಲಾ ಮರಿಯಾನ್ ಶೇ.95.2, ಪಿ. ಚಾಂದನಿ ಶೇ. 94.72, ಸನ್ನಿಧಿ ಸುಧೀರ್ ಭಟ್ಕಳ್ಕರ್ ಶೇ.94.7, ಶ್ರೇಯಸ್ ಶೆಟ್ಟಿಗಾರ್ ಶೇ.94.5, ಪ್ರಜ್ವಲ್ ಮೊಗೇರ ಶೇ.94.24, ರಾಘವೇಂದ್ರ ನಾಯ್ಕ ಶೇ.94.2, ದರ್ಶನ್ ಆಚಾರ್ಯ ಶೇ.94, ಅಶ್ವಿನ್ ಅನಂತ ಶ್ಯಾನಭಾಗ ಶೇ.93.7, ಸುಮಂತ್ ಜಿ. ಹೆಗಡೆ ಶೇ.93.6, ವೆಲೋಯಿಸ್ ಡಿಸೋಜ ಶೇ.93.6, ಫಾತಿಮಾ ಇನಾಸ್ ಶೇ. 93.1, ಶಮೂನ್ ಎನ್ .ನಾಯ್ಕ ಶೇ.92.9, ಶ್ರೇಯಾ ಕೆ. ಶೇಟ್ ಶೇ.92.9, ವಿಶಾಲ್ ಎಸ್. ನಾಯ್ಕ ಶೇ.92.9, ಅಲೋಕ ಶೆಟ್ಟಿ ಶೇ.92.4, ಗಜಾನನ ನಾಯಕ ಶೇ.92.4, ಅಭಿಲಾಶ ಶೆಟ್ಟಿ ಶೇ.92.3, ಹರ್ಷಿತಾ ಕೆ. ನಾಯ್ಕ ಶೇ.92, ಅಮೃತಾ ಅನಂತ ಶ್ಯಾನಭಾಗ್ ಶೇ.91.6, ವಿಭಾ ರಾವ್ ಶೇ. 91.3, ಅಬ್ದುಲ್ಲಾ ಲಸ್ಕೇರಿ ಶೇ.90.7, ಶಮೂನ್ ಟಿ. ನಾಯ್ಕ ಶೇ.90.5, ಜಫೀನ್ ತೋಮಸ್ ಶೇ.90.24, ವಿವೇಕ ನಾಯ್ಕ ಶೇ.90.24, ರುಕ್ನುದ್ದೀನ್ ಅಬುಬಕ್ಕರ್ ಶೇ.90, ಸಪ್ನಾ ಎಂ. ಶೇಟ್ ಶೇ.90 ಅಂಕಗಳನ್ನು ಗಳಿಸಿದ್ದಾರೆ.
ಉತ್ತಮ ಅಂಕಗಳನ್ನು ಗಳಿಸಿದ ಹಾಗೂ 71 ಡಿಸ್ಟಿಂಗ್ಷನ್ ಪಡೆದ ವಿದ್ಯಾರ್ಥಿ ವೃಂದವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಥೆರೆಸಿಯಾ ಸೆರಾ, ಪಾಲಕ ಬೋಧಕ ಸಮಿತಿ, ಬೋಧಕ ವೃಂದ ಅಭಿನಂದಿಸಿದೆ.
Leave a Comment