ಭಟ್ಕಳ:
2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮುರ್ಡೇಶ್ವರದ ಇಕ್ರಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
4 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಗಶನ್), 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಅಶಾದ್ ರಝಾ ಶೇ. 93.6 ಅಂಕಗಳೊಂದಿಗೆ ಪ್ರಥಮ, ಶಮಿಕಾ ಶೇ. 92.64 ಅಂಕಗಳೊಂದಿಗೆ ದ್ವಿತೀಯ ಹಾಗೂ ಮೊಹಮ್ಮದ್ ಅರ್ಮಾನ್ ಶೇ. 88.64 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಅಧ್ಯಕ್ಷ ಮೊಹಸೀನ್ ಹುಸೇನ ಜುಕ್ಕಾ, ಪ್ರಾಂಶುಪಾಲೆ ನಸೀಮ್ಬಾನು ಶೇಖ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
Leave a Comment