ಭಟ್ಕಳ:
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜೀವನ ಶೈಲಿಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿಗಳಾದ ದೇವರಾಜ ಪ್ರಭು ಅವರು ಆಧುನಿಕ ಜೀವನ ಶೈಲಿಯೇ ನಮ್ಮ ಇಂದಿನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ನಮ್ಮ ಆಹಾರ ಕ್ರಮ ದಿನಚರಿಗಳಲ್ಲಿ ನಮ್ಮ ಹಿರಿಯರು ಅತ್ಯಂತ ವೈಜ್ಞಾನಿಕವಾದ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರು. ಹಾಗಾಗಿ ಅವರು ಆರೋಗ್ಯವಂತರಾಗಿದ್ದರು ಅಲ್ಲದೇ ದೀರ್ಘಾಯುಶಿಗಳಾಗಿದ್ದರು. ಹಾಗಾಗಿ ನಾವೆಲ್ಲರೂ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಆರ್. ನರಸಿಂಹಮೂರ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯೋಗ ವೈದ್ಯ ಡಾ. ಆದರ್ಶ, ಉಪನ್ಯಾಸಕ ವೃಂದ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Leave a Comment