ಭಟ್ಕಳ:
ಮಣ್ಕುಳಿಯ ಪುಷ್ಪಾಂಜಲಿ ರಸ್ತೆಯಲ್ಲಿರುವ ದಯಾನಂದ ವಿಜಯಕುಮಾರ್ ಪ್ರಭು ಅವರ ಮನೆಗೆ ವಿದ್ಯುತ್ ಶಾರ್ಟ ಸರ್ಕೀಟ್ನಿಂದ ಬೆಂಕಿ ತಗುಲಿ ಅಪಾರ ಹಾನಿಯಾದ ಕುರಿತು ವರದಿಯಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯೊಳಗಿಂದ ಹೊಗೆ ಕಾಣಿಸಿಕೊಂಡಿದ್ದು ತಕ್ಷಣ ಅಕ್ಕಪಕ್ಕದವರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಲು ಶಕ್ತರಾದರೂ ಸಹ ಮನೆಯೊಳಗಿದ್ದ ಪೀಠೋಪಕರಣ, ಬಟ್ಟೆಗಳು, ದಿನಸಿ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿವೆ ಎನ್ನಲಾಗಿದೆ. ಹಾನಿಯಾಗಿರುವ ವಸ್ತುಗಳು ಮೌಲ್ಯದ ಕುರಿತು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
Leave a Comment