ಕಾರವಾರ:
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ 6ದಿನಗಳಿಂದ ನಡೆಯುತ್ತಿದ್ದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದ ಸೋಮವಾರ ಮುಕ್ತಾಯಗೊಂಡಿದ್ದು, ಕೊನೆದಿನ ವಿದ್ಯಾರ್ಥಿಗಳು ವಿಜ್ಞಾನ ಕೇಂದ್ರ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟರು.
ಆರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪವಾರ, ಜೀವ ವೈವಿದ್ಯವ ವಿಶೇಷಗಳ ಬಗ್ಗೆ ಉಪನ್ಯಾಸ ನೀಡಿದರು. ವಲಯ ಅರಣ್ಯಾಧಿಕಾರಿ ಕೆ.ಡಿ.ನಾಯ್ಕ ಮಾತನಾಡಿ, ಅರಣ್ಯ ಸಂಪತ್ತು ರಕ್ಷಣೆಯ ಬಗ್ಗೆ ತಿಳಿಸಿದರು. ಇನ್ನೊರ್ವ ವಲಯ ಅರಣ್ಯಾಧಿಕಾರಿ ಪಿ. ಹೆಚ್. ಪೇಲಣ್ಣವರ ಮಾತನಾಡಿ, ವನ್ಯಸಂಪತ್ತಿನಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಎನ್. ಜಿ. ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕೇಂದ್ರದ ಹಿರಿಯ ಸದಸ್ಯ ಅನಂತ ರಾಯ್ಕರ ಕಾರ್ಯಕ್ರಮದಲ್ಲಿದ್ದರು.
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ಅರಣ್ಯ ಇಲಾಖೆ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಸಂಘಟಿಸಲಾಗಿತ್ತು. ಜೀವವೈವಿದ್ಯ ದಿನಾಚರಣೆಯ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸೆಂಟ್ ಜೋಸೆಪ್ಸ್ ಸ್ಕೂಲ್ನ ಸುಪ್ರೀಯಾ ತೆಂಡುಲಕರ ಪ್ರಥಮ ಬಹುಮಾನ ಪಡೆದರು. ಬಾಲ ಮಂದಿರ ಪ್ರೌಢಶಾಲೆಯ ಅನ್ಯನ ಡಿ. ನಾಯ್ಕ ದ್ವಿತೀಯ, ಸೆಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್ನ ರಾಜ ಎಸ್. ತಳೆಕರ್ ತೃತಿಯ ಹಾಗೂ ಸೆಂಟ್ ಜೋಸೆಪ್ಸ್ ಸ್ಕೂಲ್ನ ಮೊಹಿತ್ ನಾಗೇಕರ್ ಸಮಾಧಾನಕರ ಬಹುಮಾನ ಪಡೆದರು.
ಸಮಿತಾ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಶ್ರೇಯಸ್ ನಾಯಕ ವರದಿ ವಾಚಿಸಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿಗಳಾದ ವಿ.ಎನ್.ನಾಯಕ ಪ್ರಸ್ಥಾಪಿಸಿದರು. ಸುರಜ ಕಾಮತ ಮತ್ತು ಬಿ.ಎನ್.ನಮಿತಾ ಅನುಭವ ಹಂಚಿಕೊಂಡರು. ಸಿಂಧು ನಾಯ್ಕ ಸ್ವಾಗತಿಸಿದರು. ಪೂಜಾ ಗಾಂವಕರ ಮತ್ತು ಆರ್ಯಾ ಭಕ್ತಾ ನಿರ್ವಹಿಸಿದರು. ಸಹನಾ ನಾಯ್ಕ ವಂದಿಸಿದರು.
Leave a Comment