ದಾಂಡೇಲಿ;
ದಾಂಡೇಲಿ ಪ್ರವಾಸೋಧ್ಯಮಿಗಳ ಸಂಘ (ಡಿ.ಟಿ.ಎ) ಇದರ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ಇತ್ತೀಚೆಗೆ ಜರುಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಮಿಲೀಂದ ಕೋಡ್ಕಣಿಯವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮೋಹನ ಹಲವಾಯಿ ಮತ್ತು ಕೋಶಾಧಿಕಾರಿಯಾಗಿ ಮುರಳಿಧರ್ ನಾಯ್ಕ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರುಗಳಾಗಿ ಮಂಜು ರಾಥೋಡ ಮತ್ತು ರಾಜು ಸರ್ವರ್, ಸಹ ಕಾರ್ಯದರ್ಶಿಯಾಗಿ ಫರೀದ್ ಅವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ನಿರ್ಗಮಿತ ಅಧ್ಯಕ್ಷ ಅನಿಲ್ ದಂಡಗಲ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಹಾಗೂ ಸಂಘದ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಮೋಹನ ಹಲವಾಯಿ ಮಿಲೀಂದ ಕೊಡ್ಕಣಿ
Leave a Comment