ಕಾರವಾರ:
ಕಣಸಗೇರಿಯಲ್ಲಿನ ಗೋಮಾಳವನ್ನು ಕಾರಾಗೃಹವನ್ನಾಗಿ ಪರಿವರ್ತಿಸಬಾರದು ಎಂದು ವಿವಿಧ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿವೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಮನವಿ ಸಲ್ಲಿಸಿರುವ ನಿಯೋಗ, ಕಣಸಗೇರಿ ಗ್ರಾಮದ ಸರ್ವೇ ನಂಬರ 95ರ ಜಮೀನು ಗೋಮಾಳ ಭೂಮಿಯಾದೆ. ಈ ಭೂಮಿಯನ್ನು ಕಾರಾಗೃಹ ಇಲಾಖೆಗೆ ಹಸ್ತಾಂತರಿಸುವದು ಕಂದಾಯ ಇಲಾಖೆ ಕಾನೂನು ಹಾಗೂ ನಿಯಮಗಳಿಗೆ ವಿರುದ್ದವಾಗಿದೆ ಎಂದು ವಿವರಿಸಿದರು. ಗೋಮಾಳ ಭೂಮಿಯ ಪರಬಾರೆಯನ್ನು ರದ್ದುಗೊಳಿಸಬೇಕು. ಗೋ ಸಂಕುಲಕ್ಕೆ ಈ ಭೂಮಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್ ಪೈ, ಪ್ರಮುಖರಾದ ಬಿ.ಜಿ ಮೋಹನ, ಸಂತೋಷ ಮಾಳ್ಸೆಕರ್, ಪ್ರೀತಂ ಮಾಸೂರಕರ, ಮನೋಜ ಭಟ್ಟ, ಸುಭಾಷ ಗುನಗಿ ಇತರರಿದ್ದರು.
Leave a Comment