ಕಾರವಾರ:
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಬಿಣಗಾ ಬಳಿ ಶನಿವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಐಎನ್ಎಸ್ ಕದಂಬದ ಉದ್ಯೋಗಿಯಾಗಿದ್ದ ದೀಪಕ್ ದುಬೇ (27) ಮೃತಪಟ್ಟ ವ್ಯಕ್ತಿ. ಕಾರವಾರದ ಕಡೆ ಬೈಕಿನಲ್ಲಿ ಆಗಮಿಸುತ್ತಿದ್ದಾಗ, ಎದುರಿನಿಂದ ಬಂದ ವಾಸ್ಕೋ- ಹೊನ್ನಾವರ ಸಾರಿಗೆ ಸಂಸ್ಥೆಯ ಬಸ್ಸು ಢಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಐ.ಎನ್.ಎಸ್. ಪತಂಜಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕ ಗಣೇಶ್ ನಾಯಕ ಅವರ ಮೇಲೆ ಪ್ರಕರಣ ದಾಖಲಾಗಿದೆ.
Leave a Comment