ಕಾರವಾರ:
ಪಶು ಸಂಗೋಪನಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಅಮೃತ ಯೋಜನೆಯಲ್ಲಿ ಕುರಿ/ಮೇಕೆ ಘಟಕ ವೆಚ್ಚವು ರೂ. 10 ಸಾವಿರ ಇದ್ದು ಸಾಮಾನ್ಯ ವರ್ಗದವರಿಗೆ 7500 ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ. 9 ಸಾವಿರ ಸಹಾಯಧನವಿದ್ದು ಮಹಿಳೆಯರಿಗಾಗಿಯೇ ಇರುವ ಯೋಜನೆಯಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಎರಡು ಎಮ್ಮೆ, ಮಿಶ್ರತಳಿ ಆಕಳು, ಸಾಕಾಣಿಕೆಗಾಗಿ ರೂ. 1.20 ಲಕ್ಷ ಘಟಕ ವೆಚ್ಚ ಇರುತ್ತದೆ. ಪ.ಜಾತಿ/ಪ.ಪಂಗಡದವರಿಗೆ ಶೇ. 50 ರಷ್ಟು ಹಾಗೂ ಸಾಮಾನ್ಯ ವರ್ಗದರಿಗೆ ಶೇ. 25 ರಷ್ಟು ಸಹಾಯಧನವಿರುತ್ತದೆ. ಕುರಿ/ಮೇಕೆ ಘಟಕ ಸ್ಥಾಪನೆಗಾಗಿ 67,440 ಘಟಕ ವೆಚ್ಚ ಇರುತ್ತದೆ. . ಮಾಂಸದ ಕೋಳಿ ಘಟಕದಲ್ಲಿ 500 ಕೋಳಿಗಳ ಘಟಕ ಸ್ಥಾಪನೆ ಗುರಿ ಇದ್ದು, ಘಟಕ ವೆಚ್ಚ ರೂ. 1. ಲಕ್ಷ ಇರುತ್ತದೆ. ಪ.ಜಾತಿ/ಪ.ಪಂಗಡದವರಿಗೆ ಶೇ. 50 ರಷ್ಟು ಹಾಗೂ ಸಾಮಾನ್ಯ ವರ್ಗದರಿಗೆ ಶೇ. 25 ರಷ್ಟು ಸಹಾಯಧನವಿರುತ್ತದೆ.ಆಸಕ್ತ ಸಣ್ಣ ರೈತರು/ ಅತೀ ಸಣ್ಣ ರೈತರು/ ಕೃಷಿ ಕಾರ್ಮಿಕರು ತಮ್ಮ ಹತ್ತಿರದ ಪಶುವೈದ್ಯ ಸಂಸ್ಥೆಗಳ ಮುಖ್ಯಸ್ಥರಿಂದ ಅರ್ಜಿಯನ್ನು ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅಗಸ್ಟ 20 ರೊಳಗೆ ಅರ್ಜಿಗಳನ್ನು ಆಯಾ ತಾಲ್ಲೂಕಿನ ಪಶು ಆಸ್ಪತ್ರೆಗೆ ಸಲ್ಲಿಸಲು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
Leave a Comment