ಕಾರವಾರ:
ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕ ಹುದ್ದೆಗೆ ರೂ. 7000/- ಮಾಸಿಕ ಗೌರವಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸ ಬಯಸುವ ಸಾಮಾನ್ಯ ಅಭ್ಯರ್ಥಿ (ಮಾಜಿ ಸೈನಿಕ) 35 ವರ್ಷ, ಮತ್ತು ಮಾಜಿ ಸೈನಿಕ 38 ವರ್ಷ ವಯೋಮಿತಿಯೊಳಗಿದ್ದು ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿಬೇಕು. ಕಲಿಕಾ ಕೇಂದ್ರದಲ್ಲಿ ಪ್ರೇರಕ, ಉಪಪ್ರೇರಕರಾಗಿ ಕೆಲಸ ನಿರ್ವಹಿಸಿ ಹಾಲಿಯಾಗಿ ಖಾಲಿ ಇದ್ದವರು ಮೇಲ್ವಿಚಾರಕ ಹುದ್ದೆಗೆ ನಿಗಧಿಯಾದ ಮೀಸಲಾತಿ ಮತ್ತು ವಯೋಮಿತಿಯಲ್ಲಿದ್ದವರು ಹಾಗೂ ಅದೇ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವವರು ಅರ್ಜಿ ಸಲ್ಲಿಸತಕ್ಕದ್ದು.ಅರ್ಜಿ ನಮೂನೆ ಆಯಾ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಡೆದುಕೊಳ್ಳಬಹುದಾಗಿದೆ.ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸಲ್ಲಿಸಲು ಜುಲೈ 24 ಕೊನೆಯ ದಿನವಾಗಿರುತ್ತದೆ.
Leave a Comment