ಕಾರವಾರ:
ನಗರಸಭೆ ವ್ಯಾಪ್ತಿಯ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಶಾಸಕ ಸತೀಶ್ ಸೈಲ್ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನಗರಸಭೆ ಅಧ್ಯಕ್ಷರ ಕೋರಿಕೆ ಮೇರೆಗೆ ಪತ್ರ ಬರೆದಿರುವ ಅವರು, ವೇಗವಾಗಿ ಬೆಳವಣಿಗೆಯಾಗುತ್ತಿರುವ ಕಾರವಾರ ನಗರ ನಿವಾಸಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಕ್ರೀಡಾಂಗಣ ಅವಷ್ಯಕತೆ ಇದೆ. ಅದಕ್ಕಾಗಿ ನಗರಸಭೆ ಜಾಗ ಗುರುತಿಸಿದ್ದು, ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕಿದೆ ಎಂದು ವಿವರಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಅವರು ಪತ್ರ ಬರೆದಿದ್ದಾರೆ.
Leave a Comment