ಕಾರವಾರ:
ಅವರ್ಸಾದ ಲಕ್ಮೀನಾರಾಯಣ ದೇವಸ್ತಾನದ ಹತ್ತಿರದಿಂದ ದಂಡೆಭಾಗದವರೆಗೆ ರಸ್ತೆ ಹದಗೆಟ್ಟಿರುವದನ್ನು ಸರಿಪಡಿಸದಿದ್ದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸುವದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.ಪ್ರತಿದಿನ ಶಾಲಾ ಮಕ್ಕಳು, ಹಿರಿಯ ನಾಗರಿಕರು ಈ ರಸ್ತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಚಿಕ್ಕ ಮಳೆ ಬಂದರೂ ರಸ್ತೆಯಲ್ಲಿ ರಾಡಿ ನೀರು ತುಂಬಿಕೊಳ್ಳುತ್ತದೆ ಎಂದು ಹೇಳಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಲಿಖಿತ ಅರ್ಜಿ ಸಲ್ಲಿಸಿರುವ ಗ್ರಾಮಸ್ಥರು, ರಸ್ತೆಯನ್ನು ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಈಗ ಅಲ್ಲಿ ಬರಿ ಹೊಂಡಗಳೇ ತುಂಬಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.ಕೆಲ ದಿನಗಳ ಹಿಂದೆ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಆದರೆ ಯಾವದೇ ಪ್ರಯೋಜನವಾಗಿಲ್ಲ. ಹೀಗಾಗಿ ಭವಿಷ್ಯದಲ್ಲಿ ಬರಲಿರುವ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿರುವದಾಗಿ ಎಚ್ಚರಿಸಿದರು. ಮಹೇಶ ನಾಯ್ಕ, ಮಹಾದೇವ ತಳ್ಳೆಕರ್, ಹೊನ್ನಪ್ಪ ನಾಯಕ, ಶಂಕರ ಮಹೇಕರ ಇತರರು ಅಪರ ಜಿಲ್ಲಾಧಿಕಾರ ಎಚ್. ಪ್ರಸನ್ನರ ಮೂಲಕ ಜಿಲ್ಲಾಡಳಿತಕ್ಕೆ ಲಿಖಿತ ಅರ್ಜಿ ಸಲ್ಲಿಸಿದರು.
Leave a Comment