ಕಾರವಾರ:
ಉತ್ತರಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ರೋಗಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದು, ರೋಗ ಪತ್ತೆಯಾದ ಇಬ್ಬರು ಮಕ್ಕಳನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಭಟ್ಕಳ ತಾಲೂಕಿನ ಕರಿಕಲ್ ಗ್ರಾಮದ ಮಹಿಳೆ ನಾಗರತ್ನ ಶನಿಯಾರ ಮೊಗೇರ (35) ಮೃತಪಟ್ಟವರು. 3 ದಿನಗಳ ಹಿಂದೆ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ ಹೊನ್ನಾವರ ತಾಲೂಕಿನ ಪಾವಿನಕುರ್ವಾದಲ್ಲಿ ಒಂದು ವರ್ಷದ ಎಂಟು ತಿಂಗಳು ಮಗು ಹಾಗೂ ಮಂಕಿಯಲ್ಲಿ ಒಂದು ವರ್ಷದ ಮಗುವಿಗೆ ಎಚ್1 ಎನ್1 ಇರುವುದು ಧೃಡಪಟ್ಟಿದೆ. ಇಬ್ಬರಿಗೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿ ವೈದ್ಯಾಧಿಕಾರಿಯನ್ನು ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್ ತಿಳಿಸಿದರು.
Leave a Comment